ಲಿಂಗಸೂಗೂರು: ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಹಾಗೂ ಬಿಜೆಪಿ ಕಾಂಗ್ರೆಸ್ ಪಕ್ಷ ತೊರೆದು ಗೆಜ್ಜಲಗಟ್ಟ ಆನಾಹೊಸೂರು ಗ್ರಾಮದ ಕಾರ್ಯಕರ್ತರು, ಹಿರಿಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ರಾಯಚೂರಿನ ರಾಜ್ಯ ಉಪಾಧ್ಯಕ್ಷರು ಪಕ್ಷದ ಹಿರಿಯ ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ದೇವದುರ್ಗ ಜೆಡಿಎಸ್ ಮುಖಂಡರಾದ ಕರಿಯಮ್ಮ , ಕಲ್ಯಾಣ ಕರ್ನಾಟಕ ವೀಕ್ಷಕರು ಹಾಗೂ ಜೆಡಿಎಸ್ ರಾಜ್ಯ ಮುಖಂಡರಾದ ಸಿದ್ದು ವಾಯ್ ಬಂಡಿ ತಾಲೂಕು ಅಧ್ಯಕ್ಷ ಕೆ.ನಾಗಭೂಷಣ ಮುದಗಲ್ಲ, ಘಟಕ ಅಧ್ಯಕ್ಷರಾದ ಅಮೀರ್ ಬೇಗ ಉಸ್ತಾದ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಮಾಕಾಪುರ, ರಾಜ್ಯ ಮಹಿಳಾ ಉಪಾಧ್ಯಕ್ಷರಾದ ಮುತ್ತಮ್ಮ, ತಾಲೂಕು ಮಹಿಳಾ ಅಧ್ಯಕ್ಷರಾದ ರತ್ನಮ್ಮ ಸಕ್ರಿ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದು ಬಡಿಗೇರ್, ಹುಲಗಪ್ಪ ನಾಯಕ್ ಗುರುಗುಂಟ, ತಾಲೂಕು ಉಪಾಧ್ಯಕ್ಷರಾದ ಸೋಮನಾಥ್ ನಾಗಲಾಪುರ ಮಸ್ಕಿ ತಾಲೂಕು ಅಧ್ಯಕ್ಷರಾದ ಅಂಬರೀಶ್ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಘಟಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.