ಭೀಮಾತೀರ ಮಾಹತ್ಮರ ಪೂಣ್ಯತಾಣ : ಬಿ ಡಿ ಪಾಟೀಲ..
ಇಂಡಿ : ಭೀಮಾತೀರ ಮಾಹತ್ಮರ ಪೂಣ್ಯತಾಣ. ಇಲ್ಲಿ ಹಲವಾರು ಶರಣರು, ಸಾಧುಸಂತರು ನೆಲೆಸಿದ ಪಾವನ ಭೂಮಿ. ಅದಲ್ಲದೇ ಜಾತಿ, ಮತ, ಧರ್ಮ ಎಣಿಸದೆ ಸೌಹಾರ್ದದಿಂದ ಬಾಳಿ ಬದುಕುವ ಜನ ನಮ್ಮವರು ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.
ತಾಲೂಕೀನ ಹಿಂಗಣಿ ಗ್ರಾಮದ ಶ್ರೀ ಜೆಟ್ಟಿಂಗೇಶ್ವರ ದೇವರ 9ನೇ ವರ್ಷದ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಹಿರೇರೂಗಿ ಗ್ರಾಮದ ಜಟ್ಟಿಂಗಶ್ವರ ಗಾಯನ ಸಂಘ ಮತ್ತು ಲಮಾಣ್ಣಿಹಟ್ಟಿ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಗಾಯನ ಸಂಘ ಯವರ ಮದ್ಯ ಸುಪ್ರಸಿದ್ಧ ಡೂಳ್ಳಿನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೆಟ್ಟಂಗೇಶ್ವರ ಸಪ್ತಾಹ ಕಾರ್ಯಕ್ರಮ ಸರ್ವಧಮಿಯರು, ಕೋಮು ಸೌಹಾರ್ದದಿಂದ ಆಚರಣೆ ಮಾಡುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದು ಹಿಂಗಣಿ ಗ್ರಾಮದ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲಗೌಡ ಪಾಟೀಲ, ಅಯೂಬ್ ನಾಟೀಕರ, ಸಿದ್ದು ಡಂಗಾ, ರಮೇಶ ಬಿರಾದಾರ, ಸಿದ್ದುಗೌಡ ಕುಂಬಾರ, ಯಲ್ಲಪ್ಪ ಕಟ್ಟಿಮನಿ, ಹಿಮ್ಮತಲಾಲ ಜಮಾದಾರ, ಶಾಮರಾಯ ಬನ್ನಿ, ಪ್ರಕಾಶ ಕಟ್ಟಿಮನಿ, ಮಲ್ಲು ಕೋಳಿ, ರಾಜಕುಮಾರ ಕೋಳಿ, ಅಂಬಣ್ಣಾ ಗುಬ್ಯಾಡ, ಅಮಸಿದ್ದ ಕೋಳಿ, ಗುಂಡಪ್ಪ ಕೋಳಿ, ಅಂಬಣ್ಣ ಕೋಳಿ, ವಿಶ್ವನಾಥ ಕಟ್ಟಿಮನಿ, ಸಚಿನ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.