ಶಿಲ್ಪ ಕಲೆಗೆ ಜಕಣಾಚಾರಿ ಕೊಡುಗೆ ಶ್ರೇಷ್ಠವಾದುದು
ಇಂಡಿ : ಅಮರಶಿಲ್ಪಿ ಜಕಣಾಚಾರಿ ಜಗತ್ತಿನ ಅತ್ಯಂತ ಶ್ರೇಷ್ಠ ಶಿಲ್ಪಿ. ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಅಧ್ಬುತ ಕಲಾಕೃತಿಗಳು ಅವಿಸ್ಮರಣೀಯ ಅವುಗಳ ಸಂರಕ್ಷಣೆ ಸಮ್ಮೆಲ್ಲರ ಜವಾಬ್ದಾರಿ ಎಂದು ಇಂಡಿ ತಾಲೂಕಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಸುಜೀತ ಲಾಳಸಂಗಿ ಹೇಳಿದರು.
ನಗರದ ಸರಾಫ ಬಜಾರದಲ್ಲಿ ವಿಶ್ವಕರ್ಮ ಸಮಾಜ ತಾಲೂಕಾ ಘಟಕವತಿಯಿಂದ ನಡೆದ ವಿಶ್ವಕರ್ಮ ಜಕಣಾಚಾರಿ ಸಂಸ್ಕರಣಾ ದಿನದಲ್ಲಿ ಮಾತನಾಡುತ್ತಿದ್ದರು.
ಸುಭಾಸ ಬಡಿಗೇರ ಮಾತನಾಡಿ ಜಕಣಾಚಾರಿ ಅವರು ಬೇಲೂರು ಹಳೇಬಿಡು ಸೇರಿ ಇತರ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವದೇ ಒಂದು ಸೌಭಾಗ್ಯ ಮಾಡುವ ಕೆಲಸದಲ್ಲಿ ಜ್ಞಾನ ಶ್ರದ್ದೆ ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಯಶಸ್ಸು ಲಭಿಸುತ್ತದೆ. ಅವರ ಗುಣ ಮತ್ತು ಬೆಳೆದು ಬಂದ ಪರಿಶ್ರಮದ ಃಟನೆಗಳನ್ನು ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದು ಅತೀ ಮುಖ್ಯ ಎಂದರು.
ವಿಶ್ವಕರ್ಮ ಸಮಾಜದ ತಾಲೂಕಾ ಅಧ್ಯಕ್ಷ ರಮೇಶ ಪೊದ್ದಾರ ಮಾತನಾಡಿ ಶಿಲ್ಪಕಲೆ ಎನ್ನುವದು ಅತ್ಯಂತ ನಾಜುಕಾದ ಕೆತ್ತನೆಯ ಕಲೆ, ಇಂತಹ ವಿಶೇಷ ಕಲೆಯ ಮೂಲಕ ಅಮರಶಿಲ್ಪಿ ಜಕಣಾಚಾರಿ ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಸರಾಫ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಮತ್ತು ಶಿಲ್ಪಿ ಅಖಂಡಪ್ಪ ಪತ್ತಾರ ಇವರಿಗೆ ವಿಶ್ವಕರ್ಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಂಜೀವ ಪತ್ತಾರ, ಪ್ರವೀಣ ಪೊದ್ದಾರ, ಉಮೇಶ ಪತ್ತಾರ, ಸುರೇಶ ಪೊದ್ದಾರ,ದಿನೇಶ ಪೋದ್ದಾರ , ಗಂಗಾಧರ ಬಡಿಗೇರ, ಉದಯ ಪೋದ್ದಾರ, ಅಂಬರೀಷ ಪತ್ತಾರ ಮತ್ತಿತರಿದ್ದರು.
ಇಂಡಿ ನಗರದ ಸರಾಫ ಬಜಾರದಲ್ಲಿ ವಿಶ್ವಕರ್ಮ ಸಮಾಜ ತಾಲೂಕಾ ಘಟಕವತಿಯಿಂದ ನಡೆದ ವಿಶ್ವಕರ್ಮ ಜಕಣಾಚಾರಿ ಸಂಸ್ಕರಣಾ ದಿನದಲ್ಲಿ ಲಾಳಸಂಗಿ ಮಾತನಾಡಿದರು.




















