ರಾಯಚೂರು : ಕಾಗಿನೆಲೆ ಸಂಸ್ಥಾನದಲ್ಲಿ ಜನವರಿ 12 ರಿಂದ 14 ವರೆಗೆ ಹಾಲುಮತ ಸಾಂಸ್ಕೃತಿಕ ವೈಭವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲು ಕುರುಬ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ನಾಗವೇಣಿ ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿ ಮುಖಾಂತರ ಮಾತನಾಡಿದ ಡಾ. ನಾಗವೇಣಿ ಪಾಟೀಲ್ ಅವರು, ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಬಳಿಯಿರುವ ಶ್ರೀ ಕಾಗಿನೆಲೆ ಸಂಸ್ಥಾನ ಕಲಬುರ್ಗಿ ವಿಭಾಗದ ಪೀಠಾಧಿಪತಿಗಳಾದ ಸಿದ್ದರಾಮನಂದಪುರಿ ಸ್ವಾಮಿಜಿ ನೇತೃತ್ವದಲ್ಲಿ, ಹಾಲುಮತ ಸಾಂಸ್ಕೃತಿಕ ವೈಭವ ವಿಜೃಂಭಣೆಯಿಂದ ಜರುಗಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಒಂದು ಹಾಲು ಮತ ಸಾಂಸ್ಕೃತಿಕ ವೈಭವ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಹಬ್ಬ, ಜಾತ್ರೆಯ ವಾತಾವರಣವನ್ನು ನಿರ್ಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕು ಎಂದು ಕರೆ ನೀಡಿದರು.
ಈ ಬಾರಿಯ ಹಾಲುಮತ ಸಾಂಸ್ಕೃತಿಕ ವೈಭವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರನ್ನು ಗುರುತಿಸಿ ಅವರಿಗೆ ಕನಕಶ್ರೀ ಪ್ರಶಸ್ತಿ ಮತ್ತು ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.



















