ರಾಯಚೂರು: ಕೊರೊನಾ ಮತ್ತು ಒಮಿಕ್ರಾನ್ ವೈರಾಣು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರದ ಮಾರ್ಗಸೂಚಿ ಆಧಾರಿಸಿ ಜ.07 ರಂದು ರಾತ್ರಿ 10 ಗಂಟೆಯಿಂದ ಜ.10 ಮುಂಜಾನೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್ ಅವರು, ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಒದಗಿಸಿದ್ದಾರೆ.
ಜ.05 ರಿಂದ 19 ರವರೆಗೆ ಕೊರೊನಾ ಮಹಾಮಾರಿಯ ಹರಡುವಿಕೆ ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಮತ್ತು ವೀಕೇಂಡ್ ಅನುಷ್ಠಾನಗೊಳಿಸಲಾಗುತ್ತದೆ. ಜ.14 ರಾತ್ರಿ 10 ಗಂಟೆಯಿಂದ ಜ.17 ರ ಮುಂಜಾನೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ನಿರ್ವಹಿಸಲಾಗುತ್ತದೆ.
ರೆಸ್ಟೋರೆಂಟ್, ಹೋಟೆಲ್, ಬಾರ್, ಸಿನಿಮಾ, ಕಲ್ಯಾಣ ಮಂಟಪ, ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕೋವಿಡ್ ಹರಡದಿರುವಂತೆ ಮಾರ್ಗಸೂಚಿಗಳನ್ನು ತಿಳಿಸಲಾಗುತ್ತದೆ. ಅತ್ಯಂತ ತುರ್ತು ಚಟುವಟಿಕೆಗಳು ಹೊರತು ಪಡಿಸಿ, ಸಾರ್ವಜನಿಕರು ಅನಗತ್ಯವಾಗಿ ಓಡಾಡದಿರುವಂತೆ ಮನವಿ ಮಾಡಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.