ಮಕ್ಕಳ ಭಿಷ್ಯ ರೂಪಿಸುವುದು ತಂದೆ-ತಾಯಿ ಹಾಗೂ ಶಿಕ್ಷಕನ ಕರ್ತವ್ಯ ಮುಖ್ಯ..!
ಇಂಡಿ: ಮಕ್ಕಳ ಭಿಷ್ಯ ರೂಪಿಸುವುದು ತಂದೆ-ತಾಯಿ ಹಾಗೂ ಶಿಕ್ಷಕನ ಕರ್ತವ್ಯವಾಗಿದೆ. ಶಾಲೆಯಲ್ಲಿ ಶಿಕ್ಷಕರು ಮನೆಯಲ್ಲಿ ಪಾಲಕರು ಮಕ್ಕಳ ನಿತ್ಯದ ಪಾಠಗಳನ್ನು ಸರಿಯಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸುತ್ತ ಇರಬೇಕುಎಂದು ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಹಚಡದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಶಾಂತಿನಗರದ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ೧೬ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಕೇವಲ ಶಿಕ್ಷಣ ನೀಡಿದರೆ ಸಾಲದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸತ್ಪçಜೆಗಳನ್ನಾಗಿ ರೂಪಿಸಬೇಕು. ಈಗಿನ ಕಾಲದಲ್ಲಿ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಿ ಒಳ್ಳೆಯ ಉದೋಗಕ್ಕಾಗಿ ವಿದೇಶಗಳಿಗೂ ಕಳಿಸುತ್ತಾರೆ. ಆದರೆ ಮಕ್ಕಳು ತಮ್ಮ ತಂದೆ-ತಾಯಿಗಳ ಭಾವನೆಯನ್ನು ಅರಿಯದೇ ತಮ್ಮದೇ ಆದ ಲೋಕದಲ್ಲಿ ಬಾಳುತ್ತಾರೆ. ಕೊನೆಗೆ ತಂದೆ ಅಥವಾ ತಾಯಿ ಮೃತರಾದರೂ ಅವರ ಅಂತಿಮ ಶವಸಂಸ್ಕಾರಕ್ಕೂ ಬರದ ಮಕ್ಕಳಿದ್ದಾರೆ. ಹೀಗಾಗಿ ಮಕ್ಕಳಿಗೆ ಭಾವನೆಗಳು, ಸಂಭಂಧಗಳ ಬಗ್ಗೆ ಒಲವು ಮೂಡಿಸುವಂತೆ ಬೆಳೆಸುವ ಕಾರ್ಯವಾಗಬೇಕೆಂದರು.
ರಾಜ್ಯ ನಿಂಬೆ ಅಭಿವೃಧ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ರವಿ ಗಿಣ್ಣಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಈ ಸಂಸ್ಥೇಯ ಅಧ್ಯಕ್ಷರು ತಾವೇ ಸ್ವತ: ಸಿಪಾಯಿ, ಚಾಲಕ, ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತ ಬರುತ್ತಿರುವುದರಿಂದ ಈ ಸಂಸ್ಥೆ ಇಷ್ಟು ಬೇಗನೆ ಎತ್ತರಕ್ಕೇರಿದೆ. ಸಂಸ್ಥೆಯ ಆಡಳಿತ ಮಂಡಳಿಯ ನಿರಂತರ ಪರಿಶ್ರಮದಿಂದ ೧೬ ವರ್ಷಗಳ ಕಾಲ ಮಕ್ಕಳ ಕೊರತೆ ಇಲ್ಲದೇ ಉತ್ತಮ ಶಿಕ್ಷಣ ಭೋಧಿಸುತ್ತ ಒಳ್ಳೆಯ ಹೆಸರು ಉಳಿಸಿಕೊಂಡು ಸಾಗುತ್ತಿದೆ ಎಂದರು.
ಸಾನಿಧ್ಯವಹಿಸಿದ್ದ ಸಾರವಾಡ-ಚಿಕ್ಕಬೇವನೂರದ ಮಠದ ಚಕ್ರವರ್ತಿ ಓಕಾರಯ್ಯ ರಾಜು ಮುತ್ಯಾ ಆಶೀರ್ವಚನ ನೀಡಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ದೇಶದ ಏಳ್ಗೆ ಸಾಧ್ಯ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಗಾಂಧೀಜಿ ಕಂಡ ಕನಸು ನನಸಾಗುತ್ತದೆ. ರೂಗಿ ಗ್ರಾಮದ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯವರು ಅತೀ ಕಡಿಮೆ ಫೀ ತೆಗೆದುಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಗೋಳಸಾರದ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಂದನೇಯ ತರಗತಿಯ ವಿದ್ಯಾರ್ಥಿನಿ ಲಕ್ಷಿö್ಮÃ ಹತ್ತರಕಿ ಒಂದು ನೂರು ಗಾದೆ ಮಾತುಗಳನ್ನು ಕಂಠಪಾಠ ಮಾಡಿದ್ದು ಸೇರಿದ್ದ ಜನರಲ್ಲಿಸಂತಸ ಮೂಡಿಸಿತು.
ವೇದಿಕೆಯಲ್ಲಿ ಸಂಗನಗೌಡ ಬಿರಾದಾರ, ಉಮೇಶ ಬಳಬಟ್ಟಿ, ಪೈಗಂಬರ ಅಂಗಡಿ, ಮಾಳಪ್ಪ ನಿಂಬಾಳ, ಮಂಜುನಾಥ ತೇಲಿ, ಮೋದಿನಸಾಬ ಬಾಗವಾನ, ಬಸಲಿಂಗಪ್ಪ ಬಡಿಗೇರ, ಪರಶುರಾಮ ಹತ್ತರಕಿ, ಜಟ್ಟೆಪ್ಪ ಮರಡಿ, ಜಟ್ಟೆಪ್ಪ ಸಾಲೋಟಗಿ, ಶಂಕರ ಜಮಾದಾರ, ಪ್ರಶಾಂತ ತಳವಾರ, ರೇಖಾ ಬಡಿಗೇರ, ದಯಾನಂದ ಕೋಟಗೊಂಡ, ಗುರಪ್ಪ ಅಗಸರ, ಇಲಾಯಿ ಬಾಗವಾನ, ಸಂತೋಷ ಗಿಣ್ಣಿ, ಜಟ್ಟೆಪ್ಪ ಮೂಲಿಮನಿ ಸೇರಿದಂತೆ ಇನ್ನಿತರರು ಇದ್ದರು.
ಶಂಕರ ಜಮಾದಾರ ವರದಿಗಾರರು ಸ್ವಾಗತಿಸಿದ್ದರೆ, ಶಿಕ್ಷಕ ಪ್ರಶಾಂತ ತಳವಾರ ನಿರೂಪಿಸಿದರು.


















