• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

    ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

    ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

    ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

    ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

    ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

    ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸಿ-ಬಿಇಓ ಮುಜಾವರ

    ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

    ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಲು-ಸಚಿವ ಡಾ.ಎಂ.ಬಿ.ಪಾಟೀಲ

    ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

    ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ನಿಗದಿತ ೨೦೨೭ ರಲ್ಲಿ ಪೂರ್ಣಗೊಳಿಸಿ: ಸಂಸದ ರಮೇಶ ಜಿಗಜಿಣಗಿ

    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ

      Voiceofjanata.in

      December 29, 2025
      0
      ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ
      0
      SHARES
      43
      VIEWS
      Share on FacebookShare on TwitterShare on whatsappShare on telegramShare on Mail

      ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ

      ವಿಜಯಪುರ : ಜ್ಞಾನಯೋಗಾಶ್ರಮದ ಚೈತನ್ಯ ರೂಪಾಗಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಕಾಲಘಟ್ಟದಲ್ಲಿ ಆ ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ. ಆ ಭಗವಂತನಿಗೆ ನಾವು ಸದಾಕಾಲಕ ಕೃತಜ್ಞರಾಗಿರಬೇಕು ಎಂದು ಲೋಕ ಶಿಕ್ಷಣ ಧರ್ಮದರ್ಶಿ, ಖ್ಯಾತ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರಜಗಿ ಹೇಳಿದರು.

      ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ೩ ನೇ ಗುರುನಮನ ಮಹೋತ್ಸವದ ಮೊದಲ ದಿನದ ಗೋಷ್ಠಿ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ಗಂಧವತಿ, ಪ್ರೀತಿ ಸ್ನೇಹ, ಪಾಪ-ಪುಣ್ಯಗಳನ್ನು ಒಳಗೊಂಡವಳು ಆಕಾಶ ನಿರ್ಲೇಪವಾದದ್ದು ಯಾವುದಕ್ಕೂ ಯಾರಿಗೂ ಎಲ್ಲಿಯೂ ಅಂಟಿಕೊAಡಿಲ್ಲ. ಆದರೆ ಭೂಮಿ ಆಕಾಶ ಒಂದನ್ನೊAದು ಬಿಟ್ಟಿರಲಾರವು ಇಂಥಹ ಭೂಮಿಯ ಗಂಧ ಆಕಾಶದ ನಿರ್ಲೇಪವನ್ನು ಅರಿತವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಎಂದು ಹೇಳಿದರು.

      ಶ್ರೀ ಸಿದ್ದೇಶ್ವರ ಶ್ರೀಗಳು ಸದಾಕಾಲ ಸರಳ ಜೀವನದ ಮಹತ್ವ ಮತ್ತು ಶಕ್ತಿಯ ಬಗ್ಗೆ ಸದಾಕಾಲ ಹೇಳುತ್ತಿದ್ದರು. ಅದರಂತೆ ಯಶಸ್ಸು ಎಂದರೆ ಹಣಗಳಿಸುವುದಲ್ಲ, ಹಣದಿಂದ ಮನೆ ಕಟ್ಟಬಹುದು, ಐಷಾರಾಮಿ ಹಾಸಿಗೆ-ದಿಂಬು ಖರಿದಿಸಬಹುದು, ಅಧಿಕಾರ ಪಡೆದುಕೊಳ್ಳಬಹುದು, ಹಣದಿಂದ ಮೌಲ್ಯಯುತ ಜೀವನ ಸಾಗಿಸಲು ಸಾಧ್ಯವಿಲ್ಲ.

      ಖ್ಯಾತಿ ಮತ್ತು ಪ್ರಸಿದ್ಧಿ ಬಹಳ ದಿನ ಉಳಿಯುವುದಿಲ್ಲ. ಆದ್ದರಿಂದ ಜೀವನವನ್ನು ನಾವು ಅತ್ಯಂತ ಉತ್ಸಾಹದಿಂದ ಕಳೆಯಬೇಕು. ನಮ್ಮ ಕೊನಯುಸಿರು ಇರುವವರೆಗೂ ಉಲ್ಲಾಸದಿಂದ ಬದುಕಬೇಕು. ಪ್ರಸ್ತುತ ದಿನಮಾನದಲ್ಲಿ ನಮ್ಮ ಮಕ್ಕಳಲ್ಲಿ ಆ ಉತ್ಸಾಹ ಮತ್ತು ಆತ್ಮಸ್ಥೆöÊರ್ಯ ಕಡಿಮೆಯಾಗುತ್ತಿರುವುದು ದುರಂತದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

      ಎಲ್ಲ ಪಾಲಕರು ಈಗಿನ ಮಕ್ಕಳಿಗೆ ಮೊದಲಿಗೆ ಜೀವನೋತ್ಸಾಹ, ಎರಡನೆಯದು ಪರಿಶ್ರಮ ಮೂರನೆಯದ್ದು ಲೋಕಸ್ನೇಹ ಅಂದರೆ ಪ್ರತಿಯೊಬ್ಬರ ಬಗ್ಗೆ ಪ್ರೀತಿ, ಕಾಳಜಿ ಇರಬೇಕು ಎಂಬುವುದನ್ನು ಕಲಿಸಬೇಕು. ಜೀವನದಲ್ಲಿ ಕೊಡುವಿಕೆ ಇರಬೇಕು. ತ್ಯಾಗ ಎನ್ನುವುದು ಅತ್ಯಮೂಲ್ಯವಾದದ್ದು ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಂತೃಪ್ತ ಜೀವನ ಸಾಧ್ಯ. ಅದರಂತೆ ನಮ್ಮ ಅಪ್ಪನವರಾದ ಶ್ರೀ ಸಿದ್ದೇಶ್ವರ ಶ್ರೀಗಳ ಆಶಯದಂತೆ ನಾವೆಲ್ಲರೂ ಕೊಡುವಿಕೆಯನ್ನು ಕಲಿಯಬೇಕು. ಜೀವನ ನಮಗೆ ದೇವರು ಕೊಟ್ಟ ಒಂದು ಕೊಡುಗೆ ಅದನ್ನು ಅರ್ಥಭರಿತವಾಗಿ ಬದುಕುವ ಮೂಲಕ ನಾವು ಕೂಡ ಏನನ್ನಾದರೂ ಕೊಟ್ಟು ಹೋಗಬೇಕು ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ಕೆಪಿಎಸ್‌ಸಿಯ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅತಿಥಿ ಭಾಷಣ ಮಾಡಿ, ಈ ವಿಜಯಪುರ ಜಿಲ್ಲೆಯನ್ನು ತಮ್ಮ ತತ್ವಗಳ ಮೂಲಕ, ಪ್ರವಚನಗಳ ಮೂಲಕ ಜ್ಞಾನಭೂಮಿಯನ್ನಾಗಿ ಮಾಡುವ ಮೂಲಕ ದೇಶಾದ್ಯಂತ ಈ ಜಿಲ್ಲೆಯ ಗಮನ ಸೆಳೆಯುವಂತೆ ಮಾಡಿದ ಕೀರ್ತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದರು.

      ಅಪ್ಪಾಜೀಯವರು ತಮ್ಮ ಜೀವನದೂದ್ದಕ್ಕೂ ತಮ್ಮ ಸರಳತೆ, ಸಾಮಾನ್ಯ ಬದುಕನ್ನು ನಡೆಸುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಮಯವಾದಂತವರು. ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರಿಗೆ ನಿಜವಾದ ನಮನವನ್ನು ನಾವು ಸಲ್ಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

      ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಗದಗನ ಮಾಜಿ ಶಾಸಕ ಡಿ.ಆರ್ ಪಾಟೀಲ ಮಾತನಾಡಿ,ನಾನು ಸಹ ಅಪ್ಪನವರಾದ ಶ್ರೀ ಸಿದ್ದೇಶ್ವರ ಸಂಪರ್ಕಕ್ಕೆ ಬಂದು ಜೀವನದೂದ್ದಕ್ಕೂ ಅವರ ತತ್ವಗಳನ್ನು ಅಳವಡಿಸಿಕೊಂಡು ಬದುಕುತ್ತಿದ್ದೇನೆ ಆದರೆ ನಿಮ್ಮೆಲ್ಲರಷ್ಟು ನಾನು ಪುಣ್ಯವಂತನಲ್ಲ ಏಕೆಂದರೆ ನಿಮ್ಮಷ್ಟು ಸಮೀಪದ ಒಡನಾಟ ನನ್ನೊಂದಿಗೆ ಇರಲಿಲ್ಲ.

      ಆದರೆ ಪ್ರಮುಖವಾಗಿ ನನ್ನ ಜೀವನದಲ್ಲಿ ನಾನು ಅಪ್ಪಾಜೀಯವರ ಆಶೀರ್ವಾದದಿಂದ ಸಾಕಷ್ಟು ಬದಲಾಗಿದ್ದೇನೆ. ಅವರ ತತ್ವಗಳು, ಮಾತುಗಳು ಸದಾ ನನ್ನೊಂದಿಗೆ ಇವೆ. ಅವರು ನನ್ನನ್ನು ಅಗಲಿದ್ದಾರೆ ಎಂಬುವುದನ್ನು ಇಂದಿಗೂ ಕೂಡ ನಾನು ನಂಬುವುದಿಲ್ಲ. ಅವರು ಸದಾಕಾಲ ನನ್ನೊಂದಿಗೆಯೇ ಇದ್ದಾರೆ ಅವರು ನಮ್ಮನ್ನು ಅಗಲಿ ಎಲ್ಲಿಯೂ ಹೋಗಿಲ್ಲ. ಅವರ ಮಾತುಗಳು ಇಂದಿಗೂ ನಮ್ಮೊಂದಿಗೆ ಇವೆ. ಅವರ ಮಾತಿನಂತೆ ನಾವೆಲ್ಲರೂ ಬದುಕೋಣ. ಅವರ ತತ್ವಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮಾತ್ರವೇ ನಾವು ಅವರಿಗೆ ನಾವು ನಿಜವಾದ ಗುರುನಮನ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

      ಇದೇ ಸಂದರ್ಭದಲ್ಲಿ ಪಂಡರಾಪೂರದ ಬ್ರಹ್ಮ ಚೈತನ್ಯ ಸದ್ಗುರು ಹ.ಭ.ಪ ಶ್ರೀ ಹೃಷಿಕೇಶ ವಿಠ್ಠಲ ವಾಸ್ಕರ ಮಹಾರಾಜರು ಆಶೀರ್ವಚನ ನೀಡಿ, ಇಂದಿನ ಯುವ ಪೀಳಿಗೆ ಪಾಶ್ಚಾö್ಯತ್ಯ ಪ್ರಭಾವಕ್ಕೆ ಆಕರ್ಷಿತರಾಗುವ ಮೂಲಕ ನಮ್ಮ ಸಂಸ್ಕೃತಿ, ಪದ್ಧತಿಗಳನ್ನು ಮರೆಯುತ್ತಿರುವುದು ದುರಂತ ಎಂದರು.
      ತAತ್ರಜ್ಞಾನದ ವಿಕಸಿತ ಪರಿಣಾಮವಾಗಿ ಸಾಕಷ್ಟು ಜನರು ಹೊರದೇಶಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಹಾಗಂತ ನಾವು ನಮ್ಮತನ, ನಮ್ಮ ದೇಶವನ್ನು ಮರೆತು ಬದುಕುವಂತಾಗಬಾರದು. ನಮ್ಮ ದೇಶದಲ್ಲಿರುವಷ್ಟು ಸಂಪತ್ತು, ಜ್ಞಾನ, ವಾಸ್ತುಶಿಲ್ಪದ ಶ್ರೀಮಂತತೆಯಷ್ಟು ಬೇರೆ ಯಾವ ದೇಶದಲ್ಲಿಯೂ ಇಲ್ಲ.

      ಅದೇ ರೀತಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶಯ ಕೂಡ ಇದೇ ಆಗಿತ್ತು ಲೋಕವನ್ನೆಲ್ಲ ಒಗ್ಗೂಡಿಸಿ ನಮ್ಮ ಭಾಷೆ, ದೇಶ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಅವರು ತಮ್ಮ ತತ್ವಗಳ ಮೂಲಕ ಮಾಡುತ್ತಿದ್ದರು ಮೊದಲು ರಾಷ್ಟಿçÃಯತೆ ಎಂದು ಹೇಳುತ್ತಿದ್ದರು ಎಂದರು.

      ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಸ್ವಾಮಿ ವಿರೇಶಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿ, ಜಗತ್ತು ಕಂಡ ಮಾಹನ್ ಚಿಂತಕ ಶ್ರೀ ಸಿದ್ದೇಶ್ವರ ಶ್ರೀಗಳು.

      ಇಂದಿನ ಯುವಜನತೆ ವಿಜೃಂಭನೆ ಬದುಕಿನೆಡೆ ಬಹಳ ಆಕರ್ಷಿತರಾಗಿದ್ದಾರೆ. ಆದರೆ ನಾವೆಲ್ಲರೂ ಸರಳ ಜೀವನ ಎಂದೆAದಿಗೂ ಸಂತೃಪ್ತವಾಗಿರುತ್ತದೆ ಎಂಬುವುದನ್ನು ಅರಿಯಬೇಕು. ಅಪ್ಪನವರು ಅತ್ಯಂತ ಸರಳತೆಯಿಂದ ಬದುಕುವ ಮೂಲಕವೇ ಜಗತ್ತಿನ ಮನಸ್ಸನ್ನು ಗೆದ್ದವರು ಎಂಬುವುದನ್ನು ಮರೆಯಬಾರದು. ಅವರ ಜೀವನಶೈಲಿ ನಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು.

      ಇನ್ನು ಬಡತನ ಎನ್ನುವುದು ಶಾಪವಲ್ಲ ಸಿರಿತನ ಎನ್ನುವುದು ವರವಲ್ಲ ಎಂಬುವುದನ್ನು ನಾವು ಮರೆಯಬಾರದು ನಮ್ಮ ಮಕ್ಕಳಿಗೆ ನಾವು ಒಳ್ಳೆಯ ಶಿಕ್ಷಣವನ್ನು ನೀಡಬೇಕಿದೆ. ನಮ್ಮ ರಾಷ್ಟçದ ಬಗ್ಗೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕಿದೆ. ಯಶಸ್ವಿ ಜೀವನಕ್ಕಿಂತ ಮೌಲ್ಯಪೂರ್ಣ ಜೀವನ ಅತ್ಯಮೂಲ್ಯವಾದದ್ದು ಎಂಬುವುದನ್ನು ನಾವು ಇಂದು ನಮ್ಮ ಮಕ್ಕಳಿಗೆ ತಿಳಿಸಬೇಕಿದೆ ಎಂದರು.

      ಗೋಷ್ಠಿಯಲ್ಲಿ ಸುತ್ತೂರಿನ ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠದ ಪೂಜ್ಯ ಜಗ್ದುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸರಿಸಾಟಿಯಾದ ಮತ್ತೊಂದು ವ್ಯಕ್ತಿತ್ವವನ್ನು ನಾವು ಹುಡುಕಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ ಅವರ ಜೀವನಶೈಲಿ ಅವರ ಸರಳತೆಯೇ ನಮಗೆ ಮಾದರಿ ಎಂದರು.

      ಕೃಷಿ, ಶಿಕ್ಷಣ, ಪರಿಸರ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಅತ್ಯಂತ ಆಳವಾಗಿ ಜ್ಞಾನವನ್ನು ಹೊಂದುವ ಮೂಲಕ ಆ ಜ್ಞಾನದ ಬೀಜಗಳನ್ನು ನಮ್ಮೆಲ್ಲರಲ್ಲಿ ಬಿತ್ತಲು ಪ್ರಯತ್ನಿಸಿದ ನಿಸ್ವಾರ್ಥ ಪುಣ್ಯಾತ್ಮ ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ಹೇಳಿದರು.

      ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗಯ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ತಮ್ಮ ಪ್ರವಚನಗಳ ಮೂಲಕ ಇಡೀ ವಿಶ್ವದ ಜನಮಾನಸದಲ್ಲಿ ಉಳಿದಂತವರು ಶ್ರೀ ಸಿದ್ದೇಶ್ವರ ಶ್ರೀಗಳು. ಅವರು ಬದುಕಿದ ರೀತಿಯೇ ಅದ್ಭುತ. ಜಗತ್ತು ಕಂಡ ಅತ್ಯಂತ ಸರಳ ಸಂತ ನಮ್ಮ ಅಪ್ಪನವರು. ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರಿಗೆ ನಿಜವಾದ ಗುರುನಮನ
      ಸಲ್ಲಿಸೋಣ ಎಂದರು.

      ಗೋಷ್ಠಿಯಲ್ಲಿ ವಿವಿಧ ಸಂತರು, ಭಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

      Tags: #indi / vijayapur#It is our merit that God has saved us all#Public News#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಭಗವಂತ ನಮ್ಮೆಲ್ಲರನ್ನು ಬದುಕಿಸಿರುವುದು ನಮ್ಮ ಪುಣ್ಯ
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಕ್ಷೇತ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆ

      February 16, 2026
      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      ಸೇವಾಲಾಲರ ಮಾಲೆ ವಿಸರ್ಜನೆಯೂ ನಂತರವೂ ಭಕ್ತಿ ಮುಂದುವರಿಯಲಿ – ಡಾ.ಬಾಬುರಾಜೇಂದ್ರ ಬಿ ನಾಯಿಕ

      February 16, 2026
      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      ಮತದಾರರ ಸಾಕ್ಷರತಾ ಸಂಘಗಳ ಜಾಗೃತಿ ಚಟುವಟಿಕೆಗಳನ್ನು ಸಮರ್ಪಕವಾಗಿ ಹಮ್ಮಿಕೊಳ್ಳಿ : ಪಿ.ಎಸ್.ವಸ್ತ್ರದ

      February 16, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.