ಸಿರುಗಪ್ಪ: ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಭಾರತ ಸರ್ಕಾರ ಎಂಎಎನ್‍ಎಜಿಇ ಹೈದರಾಬಾದ್ ಉತ್ತರ ಸಮಿತಿ, ಕೃಷಿ ವಿಶ್ವವಿಧ್ಯಾಲಯ ಧಾರವಾಡ, ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ರಾಯಚೂರು, ಕೃಷಿ ಇಲಾಖೆ ಬಳ್ಳಾರಿ, ಕೃಷಿ ತಂತ್ರಜ್ಞರ ಸಂಸ್ಥೆ ಬಳ್ಳಾರಿ ಇವರ ಸಹಯೋಗದಲ್ಲಿ ನಡೆದ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳಲ್ಲಿ ಡಿಪ್ಲೋಮಾ(ದೇಸೀ)ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಶಾಸಕ ಎಂ.ಎಸ್. ಸೋಮಲಿಂಗಪ್ಪ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಅತಿವೃಷ್ಟಿ ಅನಾವೃಷ್ಟಿಯಂತಹ ಭೀಕರ ಹವಾಮಾನ ವೈಪರೀತ್ಯದ ನಡುವೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೃಷಿ ಪರಿಕರಗಳ ಮಾರಾಟಗಾರರನ್ನು ನಂಬಿ ಬೀಜಗಳ ಬಿತ್ತನೆ ಮಾಡುತ್ತಿದ್ದಾರೆ. ಆದರೆ ಕೆಲವು ಮಾರಾಟಗಾರರು ಮಾಡುವ ನಕಲಿ ಕಂಪನಿಗಳ ಕಳಪೆ ಬೀಜಗಳನ್ನು ಮಾರಾಟದಿಂದ ರೈತರು ಮೋಸ ಹೋಗುತ್ತಿದ್ದಾರೆ.
ಕೃಷಿ ಅಧಿಕಾರಿಗಳು ಅಂಥವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು. ರೈತರ ಮೇಲೆ ನಿರ್ಲಕ್ಷ್ಯ ತೋರದೆ ಸರ್ಕಾರದಿಂದ ದೊರೆಯುವ ಮೂಲಗಳ ಕುರಿತು ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯ ಮಾಡಬೇಕೆಂದು ಸೂಚಿಸಿದರು. ಅಧಿಕಾರಿಗಳಿಗಿಂತ ಮಾರಾಟಗಾರರಲ್ಲಿ ನಂಬಿಕೆ ಇಟ್ಟು ಖರೀದಿಸುವ ಬೀಜ ರಸಗೊಬ್ಬರ ಹಾಗೂ ಕೀಟನಾಶಕಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು.
ಪ್ರಧಾನಿಯವರ ಆಶಯದಂತೆ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮದ ಮೂಲಕ ನೈಸರ್ಗಿಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆಂದು ತಿಳಿಸಿದರು.
ಇದೇ ವೇಳೆ ಜಂಟಿ ಕೃಷಿ ನಿರ್ದೇಶಕ ಡಾ.ಕೆ. ಮಲ್ಲಿಕಾರ್ಜುನ, ಉಪ ಕೃಷಿ ನಿರ್ದೇಶಕ ಸಿ.ಆರ್. ಚಂದ್ರಶೇಖರ್, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಎ ಬಸವಣ್ಣೆಪ್ಪ, ಸಹಾಯಕ ಕೃಷಿ ನಿರ್ದೇಶಕ ಎನ್. ನಜೀರ್ ಅಹ್ಮದ್, ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ವಿ.ಕೆ. ಕಮತರ್, ತಾಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಂಸ್ಥೆಯ ಅಧ್ಯಕ್ಷ ಕೆ. ನಾಗನಗೌಡ, ಬಿಜೆಪಿ ಮುಖಂಡ ದಮ್ಮೂರು ಸೋಮಪ್ಪ, ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ದೇಸಿ ತರಬೇತುದಾರರು ಇದ್ದರು.