ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಇಸ್ರೋ ವಿಜ್ಞಾನಕೇಂದ್ರದ ವಿಜ್ಞಾನ ಪ್ರದರ್ಶನ ಹಾಗೂ ವಿಜ್ಞಾನಿ ವಿಲಾಸ ರಾಠೋಡರವರಿಗೆ ಸನ್ಮಾನ ಕಾರ್ಯಕ್ರಮ
ಇಂಡಿ : ಪಟ್ಟಣದ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಡಿ ಯಲ್ಲಿರುವ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯ ೧೯೮೮ರ ಬ್ಯಾಚಿನ ವಿದ್ಯಾರ್ಥಿ ವಿಲಾಸ ತಾರು ರಾಠೋಡ ಅವರು,
ಶ್ರೀಹರಿಕೋಟಾದಲ್ಲಿ ಕಳೆದ ದಿನಗಳಲ್ಲಿ ಪ್ರಯೋಗಿಸಿದ
ಮಂಗಳಯಾನ ಉಪಗ್ರಹ ಉಡಾವಣೆಯಲ್ಲಿ ಅತ್ಯಂತ
ಮುಂಚೂಣಿ ವಿಜ್ಞಾನಿಗಳಲ್ಲಿ ಒಬ್ಬರಾಗಿ ಕೆಲಸ ನಿರ್ವಹಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನ ಇಸ್ರೋ
ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಗಳಾಗಿ ಕೆಲಸ
ನಿರ್ವಹಿಸುತ್ತಿದ್ದು, ಅವರ ಸಾಧನೆಯನ್ನು ಗುರುತಿಸಿ ಶ್ರೀ
ಶಾಂತೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಅ.೧೯ ರಂದು
ಶನಿವಾರ ಬೆಳಿಗ್ಗೆ ೦೯:೩೦ ಗಂಟೆಗೆ ಶ್ರೀ ಶಾಂತೇಶ್ವರ ಪ್ರೌಢ
ಶಾಲಾ ಆವರಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿ/ ನಿಯರಲ್ಲದೇ ಇಂಡಿ ತಾಲೂಕಿನ ೫ ಸಾವಿರ ವಿದ್ಯಾರ್ಥಿ ನಿಯರಿಗೆ ವಿಜ್ಞಾನದ ಹೊಸ ಆವಿಷ್ಕಾರಗಳ ಬಗ್ಗೆ ಮಾಹಿತಿಯನ್ನು ನೀಡುವಂತಹ ಸ್ಪೇಸ್‌ಆನ್ ವ್ಹೀಲ್ ಎಂಬ ಹೆಸರಿನ
ಬೆಂಗಳೂರಿನ ಇಸ್ರೋ ವಿಜ್ಞಾನ ಕೇಂದ್ರದ ಮೂಲಕ
ವಿಜ್ಞಾನದಲ್ಲಿ ಹೊಸ ಆವಿಷ್ಕಾರಗೊಂಡ ರಾಕೇಟಗಳು ಹಾಗೂ ಉಪಗ್ರಹಗಳ ಬಗ್ಗೆ ಜಾಗೃತಿ ಮೂಡಿಸುವಂತಹ ವಿಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಕೂಡ ಅ.೧೯
ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಶಾಂತೇಶ್ವರ ಪ್ರೌಢ ಶಾಲಾ
ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರ ಸದುಪಯೋಗವನ್ನು ಪ್ರೌಢ ಶಾಲಾ ಹಂತದ ವಿದ್ಯಾರ್ಥಿ/ ನಿಯರುಪಡೆದುಕೊಳ್ಳಬೇಕೆಂದು ಸಂಸ್ಥೆಯಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲರವರು ತಿಳಿಸಿದ್ದಾರೆ.