ಚಂದ್ರನ ಅಂಗಳದಲ್ಲಿ ಇಸ್ರೋ ಐತಿಹಾಸಿಕ ಸಾಧನೆ..!
VOJ- Desk : ಭಾರತದ ಐತಿಹಾಸಿಕ ಕ್ಷಣ ಜಗತ್ತೇ ನೋಡುತ್ತಿದೆ. ದಕ್ಷಿಣ ದೃವದಲ್ಲಿ ಕಾಲಿಟ್ಟ ಮೊದಲ ದೇಶ ಭಾರತ. ಚೀನಾ, ರಷ್ಯಾ, ಅಮೇರಿಕ ಸಾಧನೆ ಹಿಮ್ಮಟಿಸದ ಭಾರತ. ಹೌದು ನಿರೀಕ್ಷೆಯಂತೆ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋ ದಚಂದ್ರಯಾನ 3ರ ಸಾಫ್ಟ್ ಲ್ಯಾಂಡಿಂಗ್ ನಿರೀಕ್ಷೆಯಂತೆ ಯಶಸ್ವಿಯಾಗಿ ನಡೆಯಿತು. ಲ್ಯಾಂಡರ್ ಮಾಡ್ಯೂಲ್ ನಿಧಾನವಾಗಿ ಇಳಿದು ಚಂದ್ರನ ನೆಲವನ್ನು ಸ್ಪರ್ಶಿಸುವ ಮೂಲಕ ಸಹಸ್ರಾರು ಜನರಿಗೆ ಕೂತಹಲ ಉಂಟುಮಾಡಿತು.
ಈ ಐತಿಹಾಸಿಕ ಕ್ಷಣವನ್ನು ಇಡೀ ಜಗತ್ತೇ ಕುತೂಹಲ, ಆಶ್ಚರ್ಯಕರವಾಗಿ ಮತ್ತು ಬೆರಗುಗಣ್ಣುಗಳೊಂದಿಗೆ ನೋಡಿತ್ತು. ಬಾಹ್ಯಾಕಾಶ ಕ್ಷೇತ್ರದಲ್ಲಿ ಚಂದ್ರನ ಕಡೆಗೆ ಜಗತ್ತಿನ ಮುಂಚೂಣಿ ರಾಷ್ಟ್ರಗಳ ರೇಸ್ ಶುರುವಾಗಿದೆ. ಇಂತಹ ಸನ್ನಿವೇಶದಲ್ಲಿ ಭಾರತದ ಚಂದ್ರಯಾನ 3ರ ಕುರಿತಾದ ಕುತೂಹಲ ಹೆಚ್ಚೇ ಇತ್ತು. ಇಂತಹ ಸನ್ನಿವೇಶದಲ್ಲಿ ಭಾರತದ ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ನಿಧಾನವಾಗಿ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶವಾಗಿ ಭಾರತ ತನ್ನ ಹೆಜ್ಜೆ ಗುರುತನ್ನು ಸ್ಥಾಪಿಸಿದೆ. ಈ ಐತಿಹಾಸಿಕ ಕ್ಷಣವನ್ನು ಇಡೀ ಜಗತ್ತು ಕಣ್ತುಂಬಿಕೊಂಡಿದೆ.