ಹಿರಿಯ ಪತ್ರಕರ್ತ ಪೂಜಾರ ಇನ್ನಿಲ್ಲ..!
ಇಂಡಿ: ಪಟ್ಟಣದ ಆರ್.ಡಿ.ಈ ಸಂಸ್ಥೆಯ ಆದರ್ಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ, ಹಿರಿಯ ಪತ್ರಕರ್ತ ಈರಣ್ಣ ಪೂಜಾರ (62) ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಸೇರಿದಂತೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಇಂಡಿ ನಗರದ ರುದ್ರ ಭೂಮಿಯಲ್ಲಿ ನೆರವೇರಲಿದೆ.
ಇಂಡಿ : ಮೃತ ಈರಣ್ಣ ಪೂಜಾರ ಭಾವಚಿತ್ರ.



















