Voiceofjanata.in : IPL 2025 :
IPL 2025 : ಮೊದಲ ಪಂದ್ಯದಲ್ಲಿ ಕೆಕೆಆರ್ ಗೆ ಬಿಸಿ ಮುಟ್ಟಿಸಿದ ಆರ್ ಸಿ ಬಿ
Sports NEWS : ಐಪಿಎಲ್ 18ನೇ ಆವೃತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಕೆಕೆಆರ್ ನೀಡಿದ್ದ 175 ರನ್‌ಗಳ ಗುರಿಯನ್ನು 16.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಚೇಸ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಮೊದಲ ಎಸೆತದಿಂದಲೇ ಕೆಕೆಆರ್ ಬೌಲರ್‌ಗಳ ಬೆವರಿಳಿಸಿದ್ರು. ಕೇವಲ 25 ಎಸೆತಗಳಲ್ಲೇ ಅರ್ಧ ಶತಕ ಪೂರೈಸಿದ ಸಾಲ್ಟ್ ಭದ್ರ ಬುನಾದಿ ಹಾಕಿದ್ರು.
ಇತ್ತ ವಿರಾಟ್ ಕೊಹ್ಲಿ ಕೂಡ ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸುತ್ತ 30 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ಬೆಂಗಳೂರು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಮೂಲಕ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ಆರ್‌ಸಿಬಿ 2 ಅಂಕಗಳನ್ನು ಪಡೆದುಕೊಂಡು ಶುಭಾರಂಭಮಾಡಿದೆ.
ಸಂಕ್ಷಿಪ್ತ ಸ್ಕೋರ್
ಕೋಲ್ಕತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 174/8, ಅಜಿಂಕ್ಯ ರಹಾನೆ 56, ಸುನಿಲ್ ನರೈನ್ 44, ರಘುವಂಶಿ 30, ಕೃನಾಲ್ ಪಾಂಡ್ಯ 29ಕ್ಕೆ 3
ರಾಯಲ್ ಚಾಲೆಂಜರ್ಸ್ ಬೆಂಗಳೂರು 177/3, ಫಿಲ್ ಸಾಲ್ಟ್ 56, ವಿರಾಟ್ ಕೊಹ್ಲಿ ಅಜೇಯ 59, ರಜತ್ ಪಾಟೀದಾರ್ 34, ಸುನಿಲ್ ನರೈನ್ 27ಕ್ಕೆ 1