Voice Of Janata : Sports NEWS : IPL 2024 :
RR vs DC LIVE 7:30 PM Today
DesK NEWS : ಗುರುವಾರ, ಮಾರ್ಚ್ 28ರಂದು ಜೈಪುರದಲ್ಲಿ ನಡೆಯುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮತ್ತೊಂದು ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ.
ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಐತಿಹಾಸಿಕವಾಗಿ ಪ್ರಬಲವಾಗಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್, ಕಳೆದ ಋತುವಿನಲ್ಲಿ ನೀರಸ ತವರಿನ ದಾಖಲೆಯ ನಂತರ ಪುನರಾಗಮನ ಬಯಸುತ್ತಿದೆ.
ಇನ್ನು ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಗಾಯದಿಂದ ಅದ್ಭುತವಾಗಿ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದರೂ, ಮೈದಾನದಲ್ಲಿ ತಮ್ಮ ಎಂದಿನ ಪ್ರದರ್ಶನದತ್ತ ಗಮನ ಹರಿಸುವ ನಿರೀಕ್ಷೆ ಇದೆ. ಮೊದಲ ಪಂದ್ಯದ ಸೋಲಿನ ನೋವಿನಿಂದ ಹೊರಬರಲು ಡೆಲ್ಲಿ ಕ್ಯಾಪಿಟಲ್ಸ್ ಎದುರು ನೋಡುತ್ತಿದೆ.
ರಾಯಲ್ಸ್ ಪರ ಶಕ್ತಿ
ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಭರವಸೆಯ ಪ್ರತಿಭೆಗಳೊಂದಿಗೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ಕ್ರಮಾಂಕದ ದುರ್ಬಲತೆಯನ್ನು ಬಳಸಿಕೊಳ್ಳುವ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಹೊಂದಿದೆ.ತಮ್ಮ ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು ಅದೇ ಸ್ಥಿರತೆಯನ್ನು ಉಳಿಸಿಕೊಂಡಿದೆ ಮತ್ತು ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ನೋಡುವುದಿಲ್ಲ.
ಡೆಲ್ಲಿ ಶಕ್ತಿ
ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಬೌಲಿಂಗ್ ವಿಭಾಗದ ಶಕ್ತಿಯನ್ನು ಹೆಚ್ಚಿಸಲು ಆನ್ರಿಚ್ ನಾರ್ಟ್ಜೆ ಮರಳುವಿಕೆಯನ್ನು ನಿರೀಕ್ಷಿಸುತ್ತದೆ. ವೇಗಿ ಇಶಾಂತ್ ಶರ್ಮಾ ಅವರ ಲಭ್ಯತೆಯು ಡೆಪ್ತ್ ಸೇರಿಸುತ್ತದೆ. ಆದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ಬ್ಯಾಟಿಂಗ್ ಕ್ರಮಾಂಕ ಕಳವಳಕಾರಿಯಾಗಿದೆ. ಜೈಪುರದ ಪಿಚ್ ಸ್ಪಿನ್‌ಗೆ ಒಲವು ತೋರುತ್ತದೆ. ಹೀಗಾಗಿ ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್‌ರಂತಹ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಹೆಡ್-ಟು-ಹೆಡ್
ಉಭಯ ತಂಡಗಳು ಐಪಿಎಲ್‌ನ ಮುಖಾಮುಖಿಯಲ್ಲಿ ಬಹುತೇಕ ನೆಕ್-ಟು-ನೆಕ್ ಫೈಟ್ ಹೊಂದಿವೆ. ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪರಸ್ಪರ 27 ಬಾರಿ ಆಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ 13 ಬಾರಿ ಗೆದ್ದಿದ್ದರೆ, ರಾಜಸ್ಥಾನ್ ರಾಯಲ್ಸ್ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವಿವರ
ಸ್ಥಳ : ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವು ಗುರುವಾರ, ಮಾರ್ಚ್ 28ರಂದು ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.