ತೋಟಗಾರಿಕೆ ಬೆಳೆಗಳಿಗೆ ವಿಮಾ ಯೋಜನೆ
ಇಂಡಿ: ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾಳಿಂಬೆ, ಲಿಂಬೆ ಹಾಗೂ ದ್ರಾಕ್ಷಿ ಬೆಳೆಗಳ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಗೆ ಒಳಪಡಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್.ಎಸ್. ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಮಾ ಯೋಜನೆಗೆ ಬೆಳೆಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು ತಮ್ಮ ಆಧಾರ ಕಾರ್ಡ ಝರಾಕ್ಸ ಪಹಣ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್‌ಸಿ ಸೆಂಟರ್‌ಗಳಲ್ಲಿ ವಿಮಾ ಯೋಜನೆ ನೋಂದಾಯಿಸಿ – ಕೊಳ್ಳಬೇಕೆಂದು ತಿಳಿಸಿದ್ದಾರೆ.
ದ್ರಾಕ್ಷಿ ಬೆಳೆಗೆ ಪ್ರತೀ ಹೆಕ್ಷೇರ್ ಪ್ರದೇಶಕ್ಕೆ ೧೪೦೦೦ ರೂಪಾಯಿ ಕೊನೆಯ ದಿನಾಂಕ ಜುಲೈ ೧೭, ದಾಳಿಂಬೆ ಬೆಳೆಗೆ ಪ್ರತೀ ಹೆ. ಪ್ರದೇಶಕ್ಕೆ ೬೩೫೦ ಕೊನೆಯ ದಿನಾಂಕ ಜುಲೈ ೧ ರವರೆಗೆ, ಲಿಂಬೆ ಪ್ರತೀ ಹೆಕ್ಟೇರ್ ಪ್ರದೇಶಕ್ಕೆ ೨೮೦೦ ಕೊನೆಯ ದಿನಾಂಕ ಜುಲೈ ೧ ರವರೆಗೆ ಅವಧಿಯ ಒಳಗಾಗಿ ವಿಮಾ ಯೋಜನೆಯಡಿ ಒಳಪಡಬೇಕೆಂದು ಹೆಚ್.ಎಸ್. ಪಾಟೀಲ ತಿಳಿಸಿದ್ದಾರೆ.