ರಾಯಚೂರು: ಇತಿಹಾಸದಿಂದಲೂ ಮಹಿಳೆಯರ ಸ್ವಾಭಿಮಾನ ಮತ್ತು ಐಕ್ಯತೆಗಾಗಿ ಹೆಸರು ಮಾಡಿದವರು. ಈ ಹಿನ್ನೆಲೆಯಲ್ಲಿ ನಗರದ ವೃತ್ತಗಳನ್ನು ಗುರುತಿಸಿ ಮಹಿಳೆಯರ ಪುತ್ತಳಿ ನಿರ್ಮಿಸುವಂತೆ ಒತ್ತಾಯಿಸಿ ಮಹಿಳಾ ಸ್ವಾಭಿಮಾನ ಹೋರಾಟ ಸಮಿತಿಯು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸ್ಮರಿಸುತ್ತಾ ನಗರದಲ್ಲಿ ಪ್ರಮುಖ ವೃತ್ತಗಳಲ್ಲಿ ಸಾವಿತ್ರಿ ಭಾಯಿ ಫುಲೆ, ಫಾತಿಮಾ ಶೇಖ, ಅಕ್ಕ ಮಹಾದೇವಿ, ಅನಿ ಬೆಸೆಂಟ್. ಈ ನಾಲ್ಕು ವಿಶೇಷ ಮಹಿಳೆಯರ ಪುತ್ಥಳಿಯನ್ನು ಕೂಡಲೇ ಸೂಕ್ತ ಸ್ಥಳ ಪರಿಶೀಲಿಸಿ ಸ್ಥಾಪಿಸುವಂತೆ ಜಿಲ್ಲೆಯ ಎಲ್ಲಾ ಮಹಿಳೆಯರ ಪರವಾಗಿ ಆಗ್ರಹಿಸುತ್ತಿದೆ ಎಂದು ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಧರಣಿ ಮಾಡುವ ಮೂಲಕ ಒತ್ತಾಯ ಮಾಡಿ ಮನವಿ ಸಲ್ಲಿಸಿದರು. ಈವೇಳೆ ವಿದ್ಯಾ ಪಾಟೀಲ್, ಎಂ ಗೀತಾ, ಯಶೋದಾ, ನಿರ್ಮಲ, ಈರಮ್ಮ, ರೇಖಾ, ಕರಿಬಸ್ಸಮ್ಮ, ಅನ್ನಪೂರ್ಣ ಸೇರಿದಂತೆ ಇನ್ನಿತರ ಮಹಿಳೆಯರು ಉಪಸ್ಥಿತರಿದ್ದರು.