ಕರ್ನಾಟಕಕ್ಕೆ ಕೇಂದ್ರ ಬಜೆಟ್ ನಿಂದ ಮತ್ತೆ ಅನ್ಯಾಯ!
Voiceofjanata.in DesK News : ಬೆಂಗಳೂರು–ಹೈದರಾಬಾದ್, ಬೆಂಗಳೂರು–ಚೆನ್ನೈ ಹೈಸ್ಪೀಡ್ ರೈಲು ಸ್ವಾಗತಾರ್ಹವಾದರೂ, ಕರ್ನಾಟಕದೊಳಗೆ 100 ಕಿಮೀ ಕೂಡ ಓಡದ ಮಾರ್ಗಗಳಿಂದ ರಾಜ್ಯಕ್ಕೆ ಏನು ಲಾಭ? ಬದಲಿಗೆ ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿತ್ತು. ಇದಕ್ಕಾಗಿ ಕರ್ನಾಟಕ-ಮಹಾರಾಷ್ಟ್ರ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು.
ಡಾಲರ್ ಮೌಲ್ಯ ಕುಸಿತ, ತಲಾದಾಯದಲ್ಲಿ 136ರಿಂದ 146ನೇ ಸ್ಥಾನಕ್ಕೆ ಪತನ-ಇವೆಲ್ಲದರ ನಡುವೆ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದೊಡ್ಡ ಮಟ್ಟದ ನಿರಾಶೆ.
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ₹5,600 ಕೋಟಿ ಬಿಡುಗಡೆ ಇಲ್ಲ, ಕೃಷ್ಣಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಘೋಷಣೆ ಇಲ್ಲ, ರೈತರಿಗಾಗಿ ಒಂದೇ ಒಂದು ಪರಿಣಾಮಕಾರಿ ಯೋಜನೆಯೂ ಇಲ್ಲ.
ಕರ್ನಾಟಕದ ಅಭಿವೃದ್ಧಿ ಮಾದರಿಗಳನ್ನೇ ನಕಲು ಮಾಡಿ-ವಿಶ್ವವಿದ್ಯಾಲಯ ಟೌನ್‌ಶಿಪ್, ಮೆಡಿಕಲ್ ಟೂರಿಸಂ ಹಬ್, ಬಯೋಫಾರ್ಮಾ ಹಬ್ ಘೋಷಣೆ! ಇವೆಲ್ಲವೂ ರಾಜ್ಯದ #KWINCity ಪರಿಕಲ್ಪನೆಯ ಪ್ರತಿಬಿಂಬಗಳೇ.
ತೆರಿಗೆ ಕೊಟ್ಟು ದೇಶವನ್ನು ನಡಿಸುತ್ತಿರುವ ರಾಜ್ಯಕ್ಕೆ ನ್ಯಾಯಸಮ್ಮತ ಹಂಚಿಕೆ ಇಲ್ಲ, ಅಗತ್ಯ ಯೋಜನೆಗಳಿಗೆ ಅನುದಾನ ಇಲ್ಲ. ಇದು ಕೇವಲ ಬಜೆಟ್ ವೈಫಲ್ಯವಲ್ಲ, ಒಕ್ಕೂಟ ವ್ಯವಸ್ಥೆಯ ಆತ್ಮಕ್ಕೇ ಹೊಡೆತ!
ನಮಗೆ ನ್ಯಾಯ ಬೇಕು, ದಯೆ ಅಲ್ಲ.
#UnionBudget2026 #Budget2026 #justice4karnataka
#MB Patil face Book Page


















