ರಾಜ್ಯದ ಗಡಿ ಗ್ರಾಮಗಳಿಗೆ ಮೂಲ ಸೌಕರ್ಯ, ಸೌಲಭ್ಯ ಕಲ್ಪಿಸುವುದೇ ನನ್ನ ಗುರಿಯಾಗಿದೆ..!
ಶಾಸಕ ಎಮ್ ಆರ್ ಮಂಜುನಾಥ
ಹನೂರು : ಗಡಿ ಗ್ರಾಮಗಳಿಗೆ ಮೂಲ ಸೌಕರ್ಯ ಸೌಲಭ್ಯ ಕಲ್ಪಿಸುವುದೇ ನನ್ನ ಗುರಿಯಾಗಿದೆ ಎಂದು ಶಾಸಕ ಎಮ್ ಆರ್ ಮಂಜುನಾಥ ತಿಳಿಸಿದರು. ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಾಗೂ ರಾಜ್ಯದ ಗಡಿ ಅಂಚಿಯಂಚಿನಲ್ಲಿರುವ ಅತೂರು, ಪುದೂರು, ಕೋಟೆಯೂರು, ಮಾರಿಕೊಟ್ಟಾಯಿ ಹಾಗೂ ಇನ್ನಿತರ ಸುತ್ತಮುತ್ತಲಿನ ಚಿಕ್ಕ ಪುಟ್ಟ ಗ್ರಾಮಗಳಿಗೆ ಬೇಟಿ ನೀಡಿದರು. ಅಲ್ಲಿರುವ ನಿವಾಸಿಗಳ ಜೊತೆ ಮಾತಾನಾಡಿದ ಅವರು, ಮೂಲ ಸೌಕರ್ಯ ಮತ್ತು ಸೌಲಭ್ಯ ಗಳು ಕುರಿತು ಚೆರ್ಚೆಸಿದರು. ತದನಂತರ ಸಾರ್ವಜನಿಕ ಸಮಸ್ಯೆಗಳ ಮಾಹಿತಿ ಪಡೆದ ಅವರು ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿ ಸೂಚಿಸಿದರು. ಜನರಿಗೆ ಕುಡಿಯುವ ನೀರಿನ ತೊಂದರೆ ಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಅವರಿಗೆ ಸೂಚನೆ ನೀಡಿದರು.
ಇನ್ನೂ ಅದಲ್ಲದೇ ಗೋಪಿನಾಥ್ ಗ್ರಾಮಕ್ಕೂ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಗ್ರಾಮಸ್ಥರು ಕುಡಿಯುವ ನೀರು, ವಿದ್ಯುತ್, ರಸ್ತೆಗಳ ಸಮಸ್ಯೆ ಹಾಗೂ ಆಸ್ಪತ್ರೆ ಸೌಲಭ್ಯ ಕಲ್ಪಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಪಿನಾಥಮ್ ಗ್ರಾಮ ಪಂಚಾಯತ್ ಅಧ್ಯಕ್ಷ ಸೆಲ್ವಿಕುಮಾರ್ ಉಪಾಧ್ಯಕ್ಷ. ಮೈನಾಬಾಯಿ ಹಾಗೂ ಮುಖಂಡರು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.