ಇಂಡಿ ಹುಡುಗ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಇಂಡಿ : ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತರುವ ಶ್ರೀ ಶಾಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ವಿಶಾಲ ಶಿಂಧೆ ೨೦೨೨-೨೩ನೇ ಸಾಲಿನ ಇನ್ಪಾಯರ್ ಆವಾರ್ಡ ಸ್ಪರ್ಧೆಯಲ್ಲಿ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿಶಾಲ ಶಿಂಧೆ ವಿಜಯಪುರ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ. ದೆಹಲಿಯಲ್ಲಿ ನಡೆಯವ ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಕುಮಾರ ವಿಶಾಲ.ಸಿಂಧೆ ಇತನಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಾದ ಶ್ರೀ ಎ.ಬಿ. .ಕಲ್ಯಾಣ ಇವರಿಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ. ಬಗಲಿ, ಉಪಾಧ್ಯಕ್ಷ ನೀಲಕಂಠ ಗೌಡ .ಪಾಟೀಲ ಎಲ್ಲ ನಿರ್ದೇಶಕರು ಹಾಗೂ ಉಪಪ್ರಾಂಶುಪಾಲ ಎ.ಪಿ.ಬಿರಡ ಹಾಗೂ ಎಲ್ಲ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.