ಸ್ವತಂತ್ರ ಸೇನಾನಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳಿ-ಬಗಲಿ
ಇಂಡಿ : ದೇಶದ ಸ್ವಾತಂತ್ರದ ಸಲುವಾಗಿ ಅನೇಕ ಮಹಾನ್ ವ್ಯಕ್ತಿಗಳು ಹೋರಾಡಿ ಮಡಿದಿದ್ದಾರೆ. ಅದರಲ್ಲಿ ಮಹಾತ್ಮಾ ಗಾಂಧಿಜಿ, ಸುಭಾಷಚಂದ್ರ ಬೋಸ, ಭಗತ್‌ಸಿಂಗ್, ರಾಜಗುರು, ಸುಖದೇವ ಇತ್ಯಾದಿ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು
ಮೈಗೂಡಿಸಿಕೊಂಡು ದೇಶದ ಆದರ್ಶ ಪ್ರಜೆಗಳಾಗಬೇಕೆಂದು ಶ್ರೀ ಶಾಂತೇಶ್ವರ ವಿದ್ಯಾವರ್ಧಕ
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ ಎಂ.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ೭೭ ನೇ ಸ್ವತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಡಾ|| ದೀಪಕ ದೋಶಿ , ಸಹ-ಕಾರ್ಯದರ್ಶಿ ಸಿದ್ದಣ್ಣ ತಾಂಬೆ ಹಾಗೂ ನಿರ್ದೇಶಕÀ ಶ್ರೀ ಅಜೀತ ಧನಶೆಟ್ಟಿ , ಪ್ರಾಚಾರ್ಯ ಎಸ್.ಬಿ.ಜಾಧವ, ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಡಾ.ಸುರೇಂದ್ರ ಕೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ
ಮಹಾವಿದ್ಯಾಲಯದ ವಿದ್ಯಾರ್ಥಿ ಮುತ್ತುರಾಜ ಬಿರಾದಾರ ಇವರಿಗೆ ಗೌರವಿಸಿ ಸನ್ಮಾಸಿದರು. ಹಾಗೂ ಸ್ಕೌಟ್ & ಗೈಡ್ಸ್ನ ನಿಪುಣ ಪರೀಕ್ಷೆಯಲ್ಲಿ ತೇರ್ಗಡೆಯಾದ ರೋರ‍್ಸ್ಗಳಿಗೆ ನಿಪುಣ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಎಸ್ ಪಾಟೀಲ, ನಿರ್ದೇಶಕರುಗಳಾದ ಎಸ್‌ಆರ್.ಗಾಂಧಿ, ಸಿ.ಎ.ದೇವರ, ಎಸ್.ಎಸ್.ಶಿರಕನಳ್ಳಿ, ಎಸ್.ಎಮ್.ತೆನ್ನಳ್ಳಿ, ಹೆಚ್.ಬಿ.ಬಿರಾದಾರ, ವರ್ಧನ ದೋಶಿ ಮತ್ತಿತರಿದ್ದರು.