ರಂಗೇರಿದ ಇಂಡಿ ಪುರಸಭೆ ಚುನಾವಣೆ ಅಖಾಡ..! ಬಿಜೆಪಿ ಹಾಗೂ ಕಾಂಗ್ರೆಸ್ ಪೈಪೋಟಿ
ಇಂಡಿ: ಪುರಸಭೆಯ ಚುನಾವಣೆಯ ಕಾವು ಕ್ಷಣವೂ ಕ್ಷಣವೂ ಏರಿಕೆ ಆಗುತ್ತಿದೆ. ಇಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೈ ಹಾಗೂ ಕಮಲ ಸದಸ್ಯರು ನಾಮಪತ್ರಗಳು ಸಲ್ಲಿಸಿದ್ದಾರೆ. ಬಿಜೆಪಿ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸಾಯಬಣ್ಣ ವಾಸುದೇವ ಮೂರಮನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಪಿ ಉಟಗಿ, ನಾಮಿನೇಷನ್ ನೀಡಿದ್ದು, ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಲಿಂಬಾಜಿ ರಾಠೋಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಹಾಂಗೀರ್ ಸೌದಾಗಾರ ನಾಮಪತ್ರ ನೀಡಿದ್ದಾರೆ. ಇನ್ನು ಮಧ್ಯಾಹ್ನದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಫಲಿತಾಂಶ ಹೊರಬರಲಿದೆ.