ಇಂಡಿ ತಾಲೂಕು ಏಡ್ಸ ಇಳಿಮುಖ
ಇಂಡಿ : ಏಡ್ಸ್ ಹರಡುವಿಕೆಯಲ್ಲಿ ಇಂಡಿ ತಾಲೂಕು
ಇಳಿಮುಖವಾಗಿದೆ. ಜಾಗೃತಿ ಮೂಡಿಸುವದರಿಂದ ಜನರಲ್ಲಿ ಅರಿವು ಮೂಡಿದ ಪರಿಣಾಮ ಎಚ್.ಐ.ವಿ. ಏಡ್ಸ್ ಪ್ರಕರಣಗಳು ಇಳಿಮುಖವಾಗಿದೆ ಎಂದು ತಾಲೂಕ
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈರಣ್ಣ ಎಸ್.
ದಾರವಾಡಕರ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ನಿರೋಧಕ ಘಟಕ ವಿಜಯಪುರ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಇಂಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಎಚ್.ಐ.ವಿ. ಹಾಗೂ ಏಡ್ಸ್ ಸೋಂಕು ತಡೆಯುವಲ್ಲಿ ಯುವಜನರ ಪಾತ್ರ ಬಹು ಮುಖ್ಯವಾಗಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ತಾಲೂಕು
ಆರೋಗ್ಯ ಇಲಾಖೆಯು ಏಡ್ಸ್ ಜಾಗೃತಿಗಾಗಿ
ಹಮ್ಮಿಕೊಂಡಿದ್ದ ಜಾಥಾವನ್ನು ಪಟ್ಟಣದ ವಿವಿಧ
ಭಡವಣೆಯಲ್ಲಿ ಹಾಗೂ ಮಂಗಳವಾರ ಸಂತೆಯಲ್ಲ್ಲಿ ಎಚ್.ಐ.ವಿ ಏಡ್ಸ್ , ಸಿಪಿಲಿಸ್ ಹಾಗೂ ಹೆಪಟೈಟಿಸ್ ಬಿ
ಕುರಿತು ಜನಜಾಗೃತಿ ಆಂದೋಲನ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕ ಆಸ್ಪತ್ರೆ ಸಿಬ್ಬಂದಿಗಳಾದ
ಪ್ರವೀಣ್ ಮಾಡ್ಕರ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಜಿ. ಶೀಲವಂತ, ರಾಘವೇಂದ್ರ ಬಿರಾದಾರ, ಎನ್‍ಸಿಡಿ ವಿಭಾಗದ ಆಪ್ತ ಸಮಾಲೋಚಕ ಮಲ್ಲಿಕಾರ್ಜುನ್ ಸಿಂಗೆ,
ಆರ್‍ಕೆಎಸ್‍ಕೆ ವಿಭಾಗದ ಆಪ್ತ ಸಮಾಲೋಚಕ ಸವಿತಾ
ಕನಾಳ, ಡಿಎಸ್‍ಆರ್‍ಸಿ ವಿಭಾಗದ ಸಮಾಲೋಚಕ
ಸೋಮಣ್ಣ ಸಜ್ಜನ್, ರಕ್ತ ಶೇಖರಣ ಘಟಕದ ವಿನೋದಕುಮಾರ್ ಚಿಕ್ಕಮಠ ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಇಂಡಿ ತಾಲೂಕು ಆರೋಗ್ಯ ಇಲಾಖೆಯ ವತಿಯಿಂದ ಏಡ್ಸ್ ಜಾಗೃತಿ ಜಾಥಾ ನಡೆಸಲಾಯಿತು.