ಇಂಡಿ : ಅಭಿವೃದ್ಧಿಗಾಗಿ ಸರ್ಕಾರ ಲಕ್ಷಾಂತರ ಅನುದಾನ ಬಿಡುಗಡೆ ಮಾಡುತ್ತದೆ. ಆದ್ರೇ, ಅಭಿವೃದ್ಧಿ ಮಾತ್ರ ಪುಸ್ತಕದಲ್ಲಿ ಮಾತ್ರ ಸೀಮಿತವಾಗಿದೆ. ಹೌದು ಇಂಡಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಕಣ್ಣಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ. ಅಲ್ಲದೇ, ಧೂಳು ಸವಾರ ಕಣ್ಣಿಗೆ ಸೇರಿಕೊಂಡು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಕರ್ನಾಟಕ ಪ್ರದೇಶ ಮಾದಿಗರ ಸಂಘ ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಪಟ್ಟಣದ ಹೃದಯಭಾಗದಲ್ಲಿರುವ ಬಸವೇಶ್ವರ ವೃತ್ತದಿಂದ ಸುಮಾರು 2 ಕಿ.ಮೀ ರಸ್ತೆಯವರೆಗೆ ಪ್ರತಿ ಮಾರ್ಗದ ಡಿವೈಡರ್ ಪಕ್ಕದಲ್ಲಿ ಧೂಳು, ಮಣ್ಣಿನಿಂದ ತುಂಬಿಕೊಂಡಿದೆ. ವಾಹನ ಚಲಿಸದಂತೆ ಧೂಳು ಎದ್ದು ಹಾರಡಿ ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರ ಮತ್ತು ತರಕಾರಿ, ಹಣ್ಣು, ಕಾಯಿಪಲ್ಲೆ, ಎಣ್ಣೆಯಲ್ಲಿ ಕರೆದ ಪದಾರ್ಥಗಳ ಪ್ರತಿ ವಸ್ತುವಿನ ಮೇಲೆ ಧೂಳು ಕೂಡುತ್ತದೆ. ಇದರಿಂದ ಸಾರ್ವಜನಿಕರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಈ ಎಲ್ಲಾ ಕಾರಣಗಳು ದೊಡ್ಡ ಪ್ರಮಾಣದಲ್ಲಿ ಉದ್ಬವಿಸಿದ್ದರೂ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅದಕ್ಕಾಗಿ ಕೂಡಲೇ ತಾಲೂಕು ಆಡಳಿತ ಎಚ್ಚತ್ತುಕೊಂಡು ಕಾನೂನು ಕ್ರಮದ ಜೊತೆಗೆ ಇಂಡಿ ಜನರಿಗೆ ಅನೂಕುಲ ಕಲ್ಪಿಸಬೆಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದಾರೆ.