ಇಂಡಿ: ವಿಜಯಪುರ ಜಿಲ್ಲೆಯ ಇಂಡಿಯ ಪುರಸಭೆಯ ಚುನಾವಣೆಯ ಕಾವು ಬಿಸಿಲಿನಂತೆ ಏರಿಕೆ ಆಗುತ್ತಿದೆ. ಇಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೈ ಹಾಗೂ ಕಮಲ ಸದಸ್ಯರು ನಾಮಪತ್ರಗಳು ಸಲ್ಲಿಸಿದ್ದಾರೆ. ಬಿಜೆಪಿ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಬಾನಮ್ಮ ಯಲ್ಲಪ್ಪ ಹದರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಸ್ಮಾಯಿಲ ಅರಬ ನಾಮಿನೇಷನ್ ನೀಡಿದ್ದು, ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಭಾಗೀರಥಿ ಕುಂಬಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತಾ ಸುಧೀರ ಕಟಕಟ್ಟಿ ನಾಮಪತ್ರ ನೀಡಿದ್ದಾರೆ. ಇನ್ನು ಮಧ್ಯಾಹ್ನದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಫಲಿತಾಂಶ ಹೊರಬರಲಿದೆ.



















