ಇಂಡಿ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಸರಕಾರದ ಕಲ್ಯಾಣ ಯೋಜನೆಗಳು ಜನ ಸಾಮನ್ಯರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ನೌಕರಸ್ಥರಲ್ಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.
ಇಂಡಿ ಪಟ್ಟಣದ ಶಂಕರ್ ಪಾರ್ವತಿ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ತಾಲೂಕು ಶಾಖೆಯ ಸಂಘದ ಆಶ್ರಯದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಸಭಾಭವನ ಉದ್ಘಾಟನೆ ಮತ್ತು ಉತ್ತಮ ಸೇವೆಗೈದ ನೌಕರರಿಗೆ ಅನುಪಮ ಸೇವಾರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ಭಾರತದ ರಾಷ್ಟ್ರದಲ್ಲಿ ನೌಕರರು ಕಳಕಳಿಯಿಂದ ಸೇವೆ ಮಾಡಬೇಕು. ನಾಡಿನ ಶ್ರಯೋಭಿವೃದ್ದಿಯಲ್ಲಿ ನೌಕರಸ್ಥರ ಸೇವೆ ಬಹಳ ಮುಖ್ಯ ಎಂದರು. ಎರಡು ವರ್ಷಗಳ ಕಾಲ ಕೊವಿಡ್ ಮಾರಕ ರೋಗ ಬಿಟ್ಟು ಬಿಡದೇ ಎಷ್ಟೋ ಕುಟುಂಬಗಳು ಜೀವಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿವೆ. ಅಂತಹ ಕುಟುಂಬಗಳಿಗೆ ಆಸರೆಯಾಗಿ ಹೃದಯವೈಶಾಲಿತೆ ಮೆರೆಯಬೇಕು. ರಾಜ್ಯದ ಕೋನೆಯ ಭಾಗದಲ್ಲಿದ್ದೆವೆ ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಹೃದಯವಂತಿಕೆ ಜನರು ನಾವು ಎಂದರು.
ಪ್ರವಾಹವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸರಕಾರಿ ನೌಕರರನ್ನು ಎದುರು ಹಾಕಿಕೊಂಡ ಯಾವ ಸರಕಾರವು ಉಳಿಯಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಗುಡುಗಿದರು. ರಾಜ್ಯದಲ್ಲಿ ಸುಮಾರು ೨ ಲಕ್ಷ ಮಹಿಳಾ ನೌಕರರಿದ್ದಾರೆ. ಅವರಿಗಾಗಿ, ಶಿಶು ಪಾಲನೆಗೆ ವೇತನ ಸಹಿತ ೬ ತಿಂಗಳು ರಜೆ ನೀಡಿದ್ದು, ಕಿಡ್ನಿ ಮತ್ತು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಿಗೆ ನೌಕರರಿಗೆ ವೇತನ ಸಹಿತ ೬ ತಿಂಗಳು ರಜೆ ನೀಡಿದ್ದು ನಮ್ಮ ಸಂಘಟನೆಯ ಹೋರಾಟದ ಫಲಪ್ರದ ಎಂದರು. ಸರಕಾರಿ ನೌಕರರ ಹಲವಾರು ಬೇಡಿಕೆಗಳು ೨೦ ವರ್ಷಗಳ ಹಿಂದಯೇ ಪೂರೈಕೆಯಾಗಬೇಕಿತ್ತು. ಆದರೂ ಇಲ್ಲಿಯವರೆಗೆ ಸ್ಪಂದಿಸಿಲ್ಲ. ಅದಕ್ಕೆ ನೌಕರಸ್ಥರು ಅವಲೋಕನ ಮಾಡಿಕೊಳ್ಳೊದು ಅವಶ್ಯಕ. ನೌಕರರ ಕುಟುಂಬಸ್ಥರೂ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೂ, ಅವರ ಕುಟುಂಬದ ಆರೋಗ್ಯ ದೃಷ್ಟಿಯಿಂದ ೫೦ ಲಕ್ಷ ರೂಪಾಯಿ ವರೆಗೂ ಸರಕಾರ ಉಚಿತವಾಗಿ ಉಪಚರಿಸಬೇಕು ಎಂಬ ವಿಚಾರ ಗಮನ ಸೆಳೆಯಲಾಗಿದೆ. ಈಗಾಗಲೇ ಸರಕಾರಿ ನೌಕರಸ್ಥರು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಬೇಡಿಕೆಗಳು ಕುರಿತು ನಿರಂತರ ಒತ್ತಡ ಹಾಕೊದರ ಜೊತೆಗೆ ಗಮನ ಸೆಳೆಯುವ ಪ್ರಯತ್ನ ನಡಿದಿದೆ.
ಆದರೆ ವೈಜ್ಞಾನಿಕವಾಗಿ ನೌಕರಸ್ಥರಿಗೆ ಕೇಂದ್ರ ಮಾದರಿಯಲ್ಲಿ ವೇತನ, ಭತ್ಯಮತ್ತು ಎನ್.ಪಿ.ಎಸ್ ರದ್ದುಗೊಳಿಸಿ ಒ.ಪಿ.ಎಸ್. ಜಾರಿಗೆಗೊಳಿಸೊಬೇಕು. ಒಂದು ವೇಳೆ ಸರಕಾರ ನೌಕರಸ್ಥರ ಬೇಡಿಕೆಗೆ ನೀರಾಸಕ್ತಿ ತೋರಿದಲ್ಲಿ, ಸ್ಪಂದಿಸಿದಿದ್ದರೆ ಹೋರಾಟವೇ ಅಸ್ತ್ರ, ಸೂಕ್ತ ಮಾರ್ಗ ಎಂದು ಈಗಾಗಲೇ ನಿರ್ಧಾರ ಮಾಡಿದ್ದೆವೆ. ಬಂಧನ, ವಜಾಗೊಳಿಸುವುಂತಹ ಗೊಡ್ಡು ಬೆದರಿಕೆ ಅಂಜುವುದಿಲ್ಲ. ನನ್ನ ಸೇವೆ ಸರಕಾರಿ ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಮಾತೆ ಇಲ್ಲ. ನಾನು ನಿಮ್ಮ ಸೇವಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ್ ಪ್ರಾಸ್ಥವಿಕ ಮಾತಾನಾಡಿದರು. ಈ ಸಂದರ್ಭದಲ್ಲಿ ತಿಮ್ಮೆಗೌಡ, ಮೋಹನ ಕುಮಾರ್, ಜಗದೀಶ್ ಬೊಳುಸೂರ, ತಾಲೂಕು ಪಂಚಾಯತ್ ಅಧಿಕಾರಿ ಸುನಿಲ ಮದ್ದಿನ, ಕ್ಷೇತ್ರ ಶಿಕ್ಷಣ ಅಧಿಕಾರಿ ವಸಂತ ರಾಠೋಡ, ವಿಜಯಕುಮಾರ್ ಹತ್ತಿ, ಸೈಯದ್ ಜುಬೇರ್ ಕೆರೂರ, ಎಸ್.ಆರ್. ಕಟ್ಟಿಮನಿ ,ಅಶೋಕ ತೆಲ್ಲೂರ,
ವಿ.ಎಸ್.ಮಜ್ಜಿಗಿ, ಶಿವಕುಮಾರ್ ಹುಣಶಿಕಟ್ಟಿ, ಗಂಗಾಧರ ಜೇವೂರ, ಮಾಂತೇಶ ನಾಯಕ, ರವಿ ಬಿರಾದಾರ, ಸಿದ್ದನಗೌಡ ಚೌದ್ರಿ, ಎಸ್. ಎಸ್ ಪಾಟೀಲ್, ಎಸ್ ಸೊನ್ನಗಿ, ಬಿ.ಕೆ ಗೊಟ್ಯಾಳ, ಎಸ್.ಡಿ ಪಾಟೀಲ್ ಸ್ವಾಗತಿಸಿದರು, ಬಸವರಾಜ ಗೊರನಾಳ ನಿರೂಪಿಸಿದರು.