ಇಂಡಿ : ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿನ್ನಲೆ ಇದೀಗ ಸಿಂಧೂರದ (ಕುಂಕಮ) ವಿಷಯ ಮುನ್ನಲೆಗೆ ಬಂದಿದೆ. ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗೆ ನಿರಾಕರಸಿದ ಹಿನ್ನಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹಿಜಾಬ್ ಕೇಸರಿ ಶಾಲು ವಿಚಾರ ಕುಂಕುಮ ವಿಚಾರಕ್ಕೆ ತಳಕು ಹಾಕಿದೆ. ವಿದ್ಯಾರ್ಥಿ ಹಾಗೂ ಕಾಲೇಜಿನ ಉಪನ್ಯಾಸಕ ನಡುವೆ ವಾಗ್ವಾದ ನಡೆಯಿತು. ಕಾಲೇಜಿನ ಉಪನ್ಯಾಸಕ, ಪ್ರಾಚಾರ್ಯರು ಬಾಲಚಂದ್ರ ಪಟೇಲ್ ಹಾಗೂ ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ನಡುವೆ ಮಾತಿನ ಚಕಮಕಿಯೂ ಕೂಡಾ ನಡೆಯಿತು. ಇನ್ನು ಸ್ಥಳದಲ್ಲಿದ್ದ ಪೊಲೀಸರು ವಿದ್ಯಾರ್ಥಿಗೆ ಮನವೊಲಿಸಿ ತರಗತಿಗೆ ಕಳುಹಿಸಿದರು. ಕಾಲೇಜಿನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.