ಇಂಡಿ : ಹಣಕ್ಕಾಗಿ ಬೇಕರಿ ಮಾಲೀಕನ್ನು ಕಿಡ್ನ್ಯಾಪ್‌ಗೈದು ಬಳಿಕ ಕಿಡ್ನ್ಯಾಪ್‌ಗಳು ಪೊಲೀಸರ ಅತಿಥಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಬೇಕರಿ ಮಾಲೀಕ ಮಾನಸಿಂಗ್‌ನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ರಾಜಸ್ಥಾನ ಮೂಲದ ಮಾನಸಿಂಗ್ ನನ್ನು ಕಳೆದ ಹಲವು ವರ್ಷಗಳಿಂದ ಇಂಡಿಯಲ್ಲಿ ಬೇಕರಿ ನಡೆಸುತ್ತಿದ್ದ. ಇನ್ನು ಮಾನಸಿಂಗ್‌ನ್ನು ಕಿಡ್ನ್ಯಾಪ್‌ಮಾಡಿ ಕೈ ಹಾಗೂ ಕಾಲಿಗೆ ಚಾಕು ಚುಚ್ಚಿ ಹಲ್ಲೆ ಮಾಡಿದ್ದಾರೆ. ಇನ್ನು ಕಿಡ್ನ್ಯಾಪರ್ಸ್ 50ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ 20ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ಆದ್ರೇ, ಇಂಡಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬೇಕರಿ ಮಾಲೀಕ ಮಾನಸಿಂಗ್ ಝಳಕಿ ಕ್ರಾಸ್‌ನಿಂದ ಇದ್ದಕ್ಕಿದ್ದಂತೆ ಲೋಣಿ ಗ್ರಾಮದ ಕಡೆಗೆ ಕಿಡ್ನ್ಯಾಪ್‌ರ್ಸ್ ಕಾರು ತಿರುಗಿಸಿದ್ದಾರೆ. ಇದನ್ನು ಬೆನ್ನಟ್ಟಿ ಕಿಡ್ನಾಪರ್ಸ್‌ಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕಿಡ್ನ್ಯಾಪ್ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.