ಇಂಡಿ : ವೀರಯೋಧ ಹವಾಲ್ದಾರ್ ಹುತಾತ್ಮ ಹಿನ್ನಲೆ ಪಟ್ಟಣದ ಹೃದಯದ ಭಾಗದ ಬಸವೇಶ್ವರ ವೃತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಾಬು ಜಗಜೀವನ ರಾಮ ವೃತ್ತದಿಂದ ಟಿಪ್ಪು ಸುಲ್ತಾನ್ ವೃತದ ಮಾರ್ಗವಾಗಿ ಬಸವೇಶ್ವರ ವೃತದ ವರೆಗೆ ಕ್ಯಾಂಡಲ್ ದ್ವೀಪ ಬೆಳಗಿಸಿಕೊಂಡು ಬಸವೇಶ್ವರ ವೃತ್ ಕ್ಕೆ ಆಗಮಿಸಿ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಂತಿ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಅಯೂಬ ನಾಟಿಕಾರ ಮಾತಾನಾಡಿದ ಅವರು, ಕಳೆದ 19 ವರ್ಷಗಳಿಂದ AOC ರಿಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆನಲ್ಲಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ವೀರ ಯೋಧ ಅಲ್ತಾಫ್ ಅಹ್ಮದ ಹವಾಲ್ದಾರ ಕರ್ತವ್ಯದಲ್ಲಿದ್ದಾಗಲೇ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿರುವುದು ದುಃಖ ತಂದಿದೆ.
ದೇಶ ಸೇವೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ ಅಮರ ಯೋಧನಿಗೆ ಅನಂತ ಪ್ರಣಾಮಗಳು ಸಲ್ಲಿಸಿದರು. ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಸಮುದಾಯ ಜನರು ಬಾಯ್ ಬಾಯ್ ಅಂತಾ ಇದ್ದೇವೆ ಮುಂದೆಯೂ ಕೂಡಾ ಹಾಗೆ ಇರುತ್ತೇವೆ. ಯೋಧ ಹವಾಲ್ದಾರ್ ಅವರ ಶ್ರದ್ದಾಂಜಲಿಯನ್ನು ಎಲ್ಲಾ ಸಮುದಾಯದವರು ಸೇರಿ ಮಾಡಬೇಕಿತ್ತು. ಆದರೆ ನಮಗಿದು ಬೇಸರದ ಸಂಗತಿಯಾಗಿದೆ. ನಾವು ದಿನಾಲು ಹಿಂದೂಗಳ ಜೊತೆ ಒಡನಾಟವನ್ನು ಹೊಂದಿದ್ದೇವೆ.
ನಾವು ಮೊದಲು ಮಾನವರು. ನಂತರದಲ್ಲಿ ಜಾತಿ. ನಮ್ಮ ದೇಹದಲ್ಲಿ ಹರಿಯುವ ರಕ್ತ ಒಂದೇ, ಎಲ್ಲಾ ಧರ್ಮದವರು ಮಾನವೀಯತೆಯಿಂದ ಕಾಣಬೇಕು. ಧರ್ಮ ಯಾವುದೇ ಇರಲಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಬೇಕು ಎಂದರು. ಯಾವುದೋ ವ್ಯಕ್ತಿ, ಎಲ್ಲಿಂದೂ ಆಗಮಿಸಿ, ಪಟ್ಟಣದಲ್ಲಿ ಶಾಂತಿ ಸೌಹಾರ್ದತೆಗೆ ಭಂಗ ಮಾಡುವ ಮಾತು ಹೇಳಿರಬಹುದು. ಆದರೆ, ನಾವು ಯಾವುದೇ ಕಾರಣಕ್ಕೂ ಸಹೋದರರಾಗಿ , ಬಾಯಿ ಬಾಯಿಯಾಗಿ ಇರೋಣ. ನಾಡಿಗಾಗಲಿ, ದೇಶಕ್ಕಾಗಲಿ ಯಾರೇ ದ್ರೋಹ ಬಗೆದರು ನಾವು ಸಹಿಸಿಕೊಳ್ಳೊದಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾದೀರ ಡಾಂಗೆ, ಫಯಾಜ ಬಾಗವಾನ, ಸೊಹೇಲ ಪಠಾಣ, ಮುಜಮಿಲ ಬಾಗವಾನ, ದಾವುದ ಶೇಖ,ಉಮರ ಬಾಗವಾನ, ಏಜಾಜ ಮುನಶಿ, ಫಯಾಜ ಇನಾಮದಾರ, ಯಾಕುಬ ನದಾಫ, ಶಂಕರ ತಳವಾರ, ಪ್ರೇಮ ಕಾಲೆಬಾಗ, ವಿಕಾಸ ಮುರಮನ, ಗಿರೀಶ ಹಿಟ್ನಳ್ಳಿ, ವಸಿಂ ಖಾಜಿ ಉಪಸ್ಥಿತರಿದ್ದರು.