ಡಿ – 30, ಇಂಡಿ ಪ್ರತ್ಯೇಕ ಜಿಲ್ಲಾ ಅಭಿಪ್ರಾಯ ಸಂಗ್ರಹಿಸಲು ಸಭೆ: ತಹಶಿಲ್ದಾರ ಕಡಕಭಾವಿ
ಇಂಡಿ: ಇಂಡಿ ತಾಲೂಕು ಜಿಲ್ಲೆಯಾಗಿ ಪರಿವರ್ತನೆ
ಮಾಡುವ ಕುರಿತು ಅಭಿಪ್ರಾಯ ಸಂಗ್ರಹಿಸಲು ಡಿ. 30
ರಂದು ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ
ಕಾರ್ಯಾಲಯದ ಗುರುಭವನದಲ್ಲಿ ಬೆಳಗ್ಗೆ 11
ಗಂಟೆಗೆ ಸಭೆ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ವಹಿಸುವರು. ಆಸಕ್ತರು, ತಮ್ಮ ಅಭಿಪ್ರಾಯ ತಿಳಿಸಲು
ಸಭೆಯಲ್ಲಿ ಪಾಲ್ಗೊಳ್ಳಲು ತಹಸೀಲ್ದಾರ
ಬಿ.ಎಸ್.ಕಡಕಬಾವಿ ತಿಳಿಸಿದ್ದಾರೆ.