ಇಂಡಿ : ಇಂಡಿ ಹಿಂದೂ ಪರ ಭಕ್ತರ ಕೋಟೆಯಾಗಲಿದೆ ಎಂದು ಬಾಲವಾಗ್ಮಿ, ರಾಷ್ಟ್ರೀಯವಾದಿ ಹಾರಿಕಾ ಮಂಜುನಾಥ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆ ಸ್ವಾಮಿ ವಿವೇಕಾನಂದ ವೃತ್ ದಲ್ಲಿ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತೋತ್ಸವ ಮತ್ತು ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ವಕ್ತಾರಾಗಿ ಸನಾತದ ಧರ್ಮದ ಕುರಿತು ಮಾತಾನಾಡಿದರು. 6 ಶತಮಾನದ ಹಿಂದೆ ಶಿವಾಜಿ ಮಹಾರಾಜರ ಮಾಡಿದ್ದ ಸಾಹಸ ತ್ಯಾಗ ಇಂದಿಗೂ ನೆನೆಯುತ್ತೆವೆ ಅಂದರೆ ಅದು ಶಿವಾಜಿ ಮಹಾರಾಜರ ಸಾಧನೆ. ಪ್ರತಿಯೊಬ್ಬ ತಾಯಂದಿರೂ ಜಿಜಾಬಾಯಿಯಂತೆ ಯಾಗಬೇಕು ಅಂದಾಗ ಮಾತ್ರ ಛತ್ರಪತಿ ಶಿವಾಜಿ ಮಹಾರಾಜರಂತಹ ಮಕ್ಕಳು ಜನಿಸುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಘವ ಅಣ್ಣಿಗೇರಿ ಮಾತಾನಾಡಿದ ಅವರು, ಶಾಂತಿ ಹಾಗೂ ನೆಮ್ಮದಿಯ ಬದುಕಿಗೆ ಕಾರಣೀಭೂತರಾದ ಯೋಧರಿಗೆ ನಮನಗಳನ್ನು ಸಲ್ಲಿಸಿದರು. ಆರೆಸ್ಸೆಸ್ ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಬಂದ 25 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ.
ಇದರ ಹಿಂದೆ ರಾಜಕಾರಣಿಗಳ ಕೈವಾಡವಿದೆ. ಸ್ವಾಮಿ ವಿವೇಕಾನಂದರು, ಶಿವಾಜಿ ಮಹರಾಜರು ಕಂಡಂತ ಕನಸು ನನಸಾಗಿದಿಯಾ? ಧರ್ಮದ ಆಧಾರದ ಮೇಲೆ ಶಿವಮೊಗ್ಗದ ಹರ್ಷಾನ ಕಲೆಯಾಗಿದೆ. ಪೊಲೀಸ್ ಇಲಾಖೆಯವರು ರಾಷ್ಟ್ರ ಭಕ್ತರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಆದರೆ ತುಕಡೆ ತುಕಡೆ ಗ್ಯಾಂಗ್ ಗಳ ಮೇಲೆ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು. ನಮ್ಮ ಹೋರಾಟ ಯಾವುದೇ ಧರ್ಮದ, ಜಾತಿಯ ವಿರುದ್ಧದ ಹೋರಾಟವಲ್ಲ. ನಮದು ತುಕಡೆ ತುಕಡೆ ಗ್ಯಾಂಗ್ ವಿರುದ್ಧ ನಮ್ಮ ಹೋರಾಟ ನಡೆಯುತ್ತಿರುತ್ತದೆ ಎಂದರು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥನಂತಹ ಎದೆಗಾರಿಕೆವುಳ್ಳ ನಾಯಕ ಕರ್ನಾಟಕಕ್ಕೆ ಬೇಕಿದೆ. ಹಿಂದು ಕಾರ್ಯಕರ್ತರ ಹತ್ಯೆ ತಡೆಯಲು ಯೋಗಿ ಆದಿತ್ಯನಾಥ ಛಲ, ಎದೆಗಾರಿಕೆಯಂತಹ ನಾಯಕನಿಂದ ಮಾತ್ರ ಹತ್ಯೆಗಳನ್ನು ತಡೆಯಬಹುದು. ಇನ್ನು ಕೆಲವು ಸಂಘಟನೆಗಳಿಗೆ ಹಣದ ಬರುತ್ತಿದೆ. ಅದು ಯಾವ ಮೂಲದಿಂದ ಬರುತ್ತಿದೆ ಎನ್ನುವುದನ್ನು ಕಂಡು ಹಿಡಿಯಬೇಕಾಗಿದೆ ಎಂದು ಪೊಲೀಸರಿಗೆ ಆಗ್ರಹಿಸಿದರು.
ನಮ್ಮ ಹೋರಾಟ ಧರ್ಮದ ವಿರುದ್ಧ ಅಲ್ಲ. ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟ ಆಗಿದೆ. ಅಲ್ಲದೇ, ಕರ್ನಾಟಕ ಪೊಲೀಸರಿಗೆ ಫ್ರೀಯಾಂಡ್ ನೀಡಬೇಕು. ಇದರಿಂದ ಹತ್ಯೆ ಗಳನ್ನು ತಡೆಯಲು ಅನುಕೂಲ ಆಗುತ್ತದೆ. ಇನ್ನು ಪೊಲೀಸ ಇಲಾಖೆಯಲ್ಲಿ ರಾಜಕೀಯ ಮಾಡಬಾರದು. ಇದರಿಂದ ಸಮಸ್ಯೆ ಆಗುತ್ತದೆ ಎಂದರು.
ದಿವ್ಯ ಸಾನಿಧ್ಯ ಶ್ರೀ ಷ.ಬ್ರ.ಅಭಿನವ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ, ಮಾಜಿ ಸೈನಿಕ ಸಂಘದ ಅಧ್ಯಕ್ಷ ರಾಮಪ್ಪ ಎಲ್.ಕೆ , ಉದ್ಘಾಟಾನೆ ಮಾಜಿ ಶಾಸಕ ಡಾ || ಸಾರ್ವಭೌಮ ಬಗಲಿ, ಶ್ರೀ ಶೈಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ್, ವಿಜಯಕುಮಾರ್ ಭೋಸಲೆ ಮರೆಪ್ಪ ಗಿರಣಿ ವಡ್ಡರ, ರಾಜಗುರು ದೇವರ, ಶಂಕರಸಿಂಗ್ ಹಲವಾಯಿ, ಸಂಘದ ಪದಾಧಿಕಾರಿಗಳು ಮತ್ತು ಅನೇಕ ರಾಷ್ಟ್ರ ಅಭಿಮಾನಿಗಳು ಭಾಗವಹಿಸಿದ್ದರು.