ಇಂಡಿ : ಹಿಜಾಬ್, ಕೇಸರಿ ಶಾಲಿನ ಹೋರಾಟ ನಿಂಬೆನಾಡಿನಲ್ಲೂ ಆರಂಭವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜ್ ಹಾಗೂ ಜಿಆರ್ ಜಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವ ಮೂಲಕ ಗಮನ ಸೆಳೆದರು.
ಇದರಿಂದ ತಕ್ಷಣವೇ ಜಾಗೃತರಾದ ಆಡಳಿತ ಮಂಡಳಿ ವಿವಾದಕ್ಕೆ ಕಾರಣವಾಗಬಾರದು ಎಂದು ಶಾಲೆಗೆ ರಜೆ ಘೋಷಿಸಿತು. ಇನ್ನು ನಾಳೆಯಿಂದ ಸರ್ಕಾರದ ಆದೇಶದಂತೆ ಸಮವಸ್ತ್ರ ಹಾಕಿಕೊಂಡು ಕಾಲೇಜಿಗೆ ಬರುವಂತೆ ಸೂಚನೆ ನೀಡಿ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಮನೆಗಳಿಗೆ ವಾಪಸ್ ಹೋದರು.