ಇಂಡಿ | ಮೇ – 5 ರಂದು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಉಗ್ರವಾದ ಪ್ರತಿಭಟನೆ ಎಚ್ಚರಿಕೆ : ಕರವೇ ಅಧ್ಯಕ್ಷ ಮುಳಜಿ
ಅನ್ನದಾತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತವೆ : ಕರವೇ ಅಧ್ಯಕ್ಷ ಮುಳಜಿ
ಇಂಡಿ : ತಾಲ್ಲೂಕಿನ ಎಲ್ಲಾ ಶಾಖಾ ಕಾಲುವೆ, ಕೆರೆ, ಹಳ್ಳ ಹಾಗೂ ಭೀಮಾ ನದಿಗೆ ನೀರು ಹರಿಸಬೇಕು ಮತ್ತು ತೊಗರಿ ಬೆಳೆ ಹಾನಿಯಾಗಿದ್ದು, ವಿಶೇಷ ಪ್ಯಾಕೇಜ್ ನೀಡಿ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ – 5 ರಂದು ಕರವೇ ಹಾಗೂ ರೈತರು ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಇಂಡಿ ನಗರ, ನಾದ ಕೆಡಿ, ತಾಂಬಾ, ಝಳಕಿ, ಸಾಲೋಟಗಿ ಗ್ರಾಮಗಳಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಮಾಡಲಾಗುವುದು.
ಹಾನಿಯಾದ್ದ ತೂಗರಿ ಬೇಳೆಗೆ ಸರ್ಕಾರ ತನ್ನ ಖಜಾನೆಯಿಂದ ವಿಷೇಶ ಪ್ಯಾಕೇಜ್ ಘೋಷಣೆ ಮಾಡಿ ಪ್ರತಿ ಎಕರೆಗೆ ₹ 25 ಸಾವಿರ ಯಂತೆ ಪರಿಹಾರ ನೀಡಬೇಕು. ತಾಲೂಕಿನ ಮುಖ್ಯ ಶಾಖಾ ಎಲ್ಲಾ ಕಾಲುವೆಗೆ, ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಬೇಕು. 20 ದಿನಗಳು ಕಾಲ ಮುಖ್ಯ ಶಾಖಾ ಕಾಲುವೆಗೆ ಮತ್ತು ಹಳ್ಳ ಕೊಳಗಳಿಗೆ ನಿರ್ಲಕ್ಷ್ಯ ವಹಿಸದೆ ನೀರು ಹರಿಸಬೇಕು. ನಮ್ಮ ಭಾಗದ ರೈತರ ಭಾವನೆಗಳ ಜೊತೆ ಚಲ್ಲಾಟ ಆಡ ಬೇಡಿ. ಬೇಸಿಗೆಯ ಬೀಸಿಲಿನ ತಾಪ ಹೆಚ್ಚಾಗಿದ್ದು ರೈತರ ಹೊಲದಲ್ಲಿ ತೇವಾಂಶ ಬೇಗನೆ ಹಿಡಿಯುದಿಲ್ಲಾ. ಇದನ್ನು ಅರಿತು ಸರ್ಕಾರ ರೈತರ ಬೆಂಬಲಕ್ಕೆ ಬರಬೇಕು. ಸುಮಾರು 40 ವರ್ಷಗಳಿಂದ ತಾಲೂಕಿನಲ್ಲಿ ಬೀಕರ ಬರಗಾಲ ಆವರಿಸಿದ್ದು, ಅನ್ನದಾತರ ಸಂಕಷ್ಟಕ್ಕೆ ಸರ್ಕಾರ ಕೂಡಲೇ ಧಾವಿಸಬೇಕು.
ಇದಲ್ಲದೆ ನಗರದಲ್ಲಿ ಏ – 7 ರಂದು ತೊಗರಿ ಬೆಳೆ ವಿಮೆ ಹಣ ಮತ್ತು ಪರಿಹಾರ ಆಗ್ರಹಿಸಿ ಬಸವೇಶ್ವರ ವೃತ್ತದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕು ದಿನಗಳ ಕಾಲ ನಿರಂತರ ಹೋರಾಟ ಮಾಡಿದ್ದೇವೆ. ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಬೇಟಿ ನೀಡಿ ಸರಕಾರದ ಗಮನಕ್ಕೆ ತಂದು ಸಕಾರಾತ್ಮಕ ಸ್ಪಂದಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ
ಯಾವುದೇ ಕ್ರಮ ಜರುಗಿಲ್ಲ. ಇದು ನೋವಿನ ಸಂಗತಿ. ನಾವು ಅನ್ನದಾತರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ,ಮಹಾವೀರ ಕಾಮನಕೇರಿ, ವಿಜಯಕುಮಾರ್ ರಾಠೋಡ, ಮಂಜು ದೇವರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.