ಇಂಡಿ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನೂತನ ಉಪ ವಿಭಾಗದ ಅಧಿಕಾರಿಯಾಗಿ ರಾಮಚಂದ್ರ ಗಡಾದ ಅಧಿಕಾರ ಸ್ವೀಕರಿಸಿದರು. ಹಿಂದಿನ ನಿಕಟ ಪೂರ್ವ ಎಸಿ ಯಾದ ರಾಹುಲ್ ಸಿಂಧೆ ಯವರು ವಿಜಯಪುರಕ್ಕೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ವರ್ಗಾವಣೆ ಗೊಂಡಿದ್ದು, ರಾಹುಲ್ ಸಿಂಧೆ ಅವರನ್ನು ಪ್ರೀತಿಯಿಂದ ಬಿಳ್ಕೊಡುಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಿ.ಎಸ್ ಕುಲಕರ್ಣಿ, ಡಿ.ವಾಯ್.ಎಸ್.ಪಿ. ಶ್ರೀಧರ ದೊಡ್ಡಿ, ಆರ್.ಎಸ. ರೇವಡಿಗರ, ಗ್ರಾಮೀಣ ಸಿಪಿಐ ರಾಜಶೇಖರ ಬಡದೇಸಾರ, ಶಿರಸ್ತೆದಾರ ಪೂಜಾರಿ, ಶ್ರೀಪಾದ ಪೂಜಾರ, ಎಸ್ ಎನ್ ಕೋಳಿ, ಸಂದೀಪ ಅಲೆಗಾಂವ, ತಾಲೂಕ ಸರಕಾರಿ ನೌಕರ ಸಂಘದ ಕಾರ್ಯದರ್ಶಿ ಮೇತ್ರಿ ಮತ್ತು ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಆರೋಗ್ಯ, ಇಲಾಖೆ ಮತ್ತು ಇತರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.