ಇಂಡಿ ಮಾಡಲ್ ಸಿಟಿ, ಲೇಮನ್ ಸಿಟಿ ಕನಸು : ಶಾಸಕ ಪಾಟೀಲ
ಅತೀ ಶೀಘ್ರದಲ್ಲೇ ಇಂಡಿ ನಗರಸಭೆ : ಶಾಸಕ ಪಾಟೀಲ
ಇಂಡಿ : ನಗರ ಅಭಿವೃದ್ಧಿ, ಬೆಳವಣಿಗಾಗಿ ಶ್ರಮಸಿಬೇಸಬೇಕು. ಅದಲ್ಲದೇ ವಿಶೇಷವಾಗಿ ಮಾಡಲ್ ಸಿಟಿ, ಲೆಮನ್ ಸಿಟಿ ಮಾಡುವ ಗುರಿ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸೋಮವಾರ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಹಿನ್ನೆಲೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಹಾಗೂ ಸಮ-ಸಮಾಜದ ನಿರ್ಮಾಣದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಗಿದೆ. ಒಟ್ಟು 23 ಪುರಸಭೆ ಸದಸ್ಯ ಹಾಗೂ ಶಾಸಕ, ಸಂಸದರು ಸೇರಿ 25 ಮತಗಳಿದ್ದು, ಅದರಲ್ಲಿ 15 ಮತಗಳನ್ನು ಕಾಂಗ್ರೆಸದ ಪಕ್ಷದ ಅಭ್ಯರ್ಥಿ ಲಿಂಬಾಜಿ ರಾಠೋಡ ಅಧ್ಯಕ್ಷರಾಗಿ ಹಾಗೂ ಜಹಾಂಗೀರ್ ಸೌದಾಗಾರ ಆಯ್ಕೆಯಾಗಿದ್ದಾರೆ. ಈ ಗೆಲುವಿಗೆ ಪಕ್ಷದ ಸಂಘಟನೆ ಕಾರಣ ಎಂದರು.ಇನ್ನೂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಮನಿರ್ದೇಶನ ಸೇರಿದಂತೆ, ಚುನಾವಣೆಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ನಗರದಲ್ಲಿ 24*7 ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೂ ನಗರದ ಒಳರಸ್ತೆಗಳಿಗೆ ಹಾಗೂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳಿಗೆ ಆಧ್ಯತೆ ನೀಡಿ ಅತೀ ಶೀಘ್ರದಲ್ಲೇ ದುರಸ್ಥಿ ಕಾರ್ಯ ಮಾಡಲಾಗುವುದು. ಚುನಾವಣೆ ಬರಬಹುದು, ಹೋಗಬಹುದು. ಆದರೆ ವಿಶ್ವಾಸ, ಪ್ರೀತಿ, ಸೌಹಾರ್ದತೆಯ ಸಾಮರಸ್ಯದ ಬದುಕು ಅವಶ್ಯಕ. ಗಡಿಭಾಗದಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯನ್ನು ಬೆಳೆಸಬೇಕು. ನಗರದಲ್ಲಿ ಗತವೈಭವದ ದಿನಗಳು ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಮಹಾ ಸೌದಾಗಾರ, ಬ್ಲಾಕ್ ಅಧ್ಯಕ್ಷ ಜಾವೀದ್ ಮೋಮಿನ್, ಭೀಮಣ್ಣ ಕವಲಗಿ, ಇಲಿಯಾಸ್ ಬೊರಾಮಣಿ ಹಾಗೂ ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಅಯೂಬ್ ಬಾಗವಾನ, ಸಂಗೀತಾ ಕರಕಟ್ಟಿ, ಭಾಗಿರಥಿ ಕುಂಬಾರ, ಉಮೇಶ್ ದೇಗಿನಾಳ, ಸುದೀರ ಕರಕಟ್ಟಿ, ಸತೀಶ ಕುಂಬಾರ, ಭೀಮಾಶಂಕರ ಮೂರಮನ ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.