ಇಂಡಿ | ರೌಡಿಶೀಟರ್ ಓರ್ವನ ಬರ್ಬರ ಕೊಲೆ
ಇಂಡಿ: ತಾಲೂಕಿನ ಬರಗುಡಿ ಗ್ರಾಮದಲ್ಲಿ ರೌಡಿಶೀಟರ್ ಓರ್ವನ ಬರ್ಬರ ಕೊಲೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬಿಳಿಸಿದೆ.
ಶನಿವಾರ ರಾತ್ರಿ ೧೨ ಘಂಟೆಯ ನಂತರ ಅವಧಿಯಲ್ಲಿ ಈ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತನನನು ಬರಗುಡಿ ಗ್ರಾಮದ ಸಿದ್ರಾಮ ದೊಂಡಿಬಾ ಕ್ಷತ್ರಿ (೩೫) ಎಂದು ಗುರುತಿಸಲಾಗಿದೆ. ಬರಗುಡಿಯಿಂದ ಲಚ್ಯಾಣ ಹೋಗುವ ರಸ್ತೆಯಲ್ಲಿನ ನೀರಿನ ಟ್ಯಾಂಕ ಹತ್ತಿರದ ಹೊಲದಲ್ಲಿ ನೀರಿನ ಹೊಂಡದ ಹತ್ತಿರ ಮಾರಕಾಸ್ತçಗಳಿಂದ ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸ್ರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ, ಡಿವಾಯ್ಎಸ್ಪಿ ಸದಾಶಿವ ಕಟ್ಟಿಮನಿ, ಪಿ.ಎಸ್.ಐ ರಾಜು ಮಮದಾಪುರ ಭೇಟಿ ನೀಡಿದ್ದು ತನಿಖೆ ಮುಂದುವರೆದಿದೆ.
ಮೃತ ವ್ಯಕ್ತಿಗೆ ನಾಲ್ವರು ಆರೋಪಿತರು ಕೊಲೆಗೈದಿದ್ದು ಲಾಲ್ಯಾ@ರಜನಿಕಾಂತ ತಂದೆ ಮರೆಪ್ಪ ಗಿರಣಿವಡ್ಡರ, ಪರಸು ತಂದೆ ದಶರಥ ಕ್ಷತ್ರಿ, ಕಾಂತಪ್ಪ ತಂದೆ ಗಜಪ್ಪ ಕ್ಷತ್ರಿ, ಸರ್ಜನ ತಂದೆ ಸಿದ್ದಾರಾಮ ಕ್ಷತ್ರಿ ಇವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ತಿಳಿಸಿದ್ದಾರೆ.
ಈ ಕುರಿತು ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ: ಮೃತ ಸಿದ್ರಾಮ ದೊಂಡಿಬಾ ಕ್ಷತ್ರಿ ಭಾವಚಿತ್ರ.



















