ಇಂಡಿ : ಅಕ್ರಮ ಮದ್ಯ ಸಾಗಾಟ ಓರ್ವನ ಬಂಧನ..!
ಇಂಡಿ : ಅಕ್ರಮವಾಗಿ ಬೈಕ್‌ನಲ್ಲಿ ಮದ್ಯ ಸಾಗಾಟ ವೇಳೆ ಖಚಿತ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ದಾಳಿಗೈದು ಮದ್ಯ ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ಬಳಿ ನಡೆದಿದೆ. ದಿಲೀಪ್ ಭಜಂತ್ರಿ ಬಂಧಿತ ಆರೋಪಿ. ಇನ್ನೂ ಆರೋಪಿಯಿಂದ 9,540 ಲೀಟರ್ ಮದ್ಯ ಹಾಗೂ 7.8 ಲೀಟರ್ ಬಿಯರ್ ಹಾಗೂ ಒಂದು ಬೈಕ್ ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ವಲಯ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.