ಇಂಡಿ : ಅಮರ್ ಇಂಟರ್ನ್ಯಾಷನಲ್ ಹೋಟೆಲ್ ಲಾಡ್ಜಿಂಗ್ ನಲ್ಲಿ 30 ವರ್ಷದ ಮಹಿಳೆ ಓರ್ವಳ ಶವ ಪತ್ತೆಯಾಗಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಶಂಕೆ ವ್ಯಕ್ತವಾಗಿದೆ.
ಮೃತ ದುರ್ದೈವಿ ತಾಲೂಕಿನ ಆಳೂರು ಗ್ರಾಮದ ನಾಗಮ್ಮ ಮಾರುತಿ ಗೋಳಸಾರ ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ನಾಗಮ್ಮ ಗೋಳಸಾರ ಇಂಡಿ ನಗರಕ್ಕೆ ಆಗಮಿಸಿದ್ದು, ತದನಂತರ ಹಿರೇಬೇವನೂರ ಗ್ರಾಮದ ಮಲ್ಲಪ್ಪ ಗಂಗಪ್ಪ ಬಡಿಗೇರ ಈತನೊಂದಿಗೆ ಅಮರ್ ಲಾಡ್ಜ್ ಗೆ ತೆರಳಿದ್ದರು. ಅಲ್ಲಿ ಇಬ್ಬರು ಸೇರಿ ಲಾಡ್ಜ ಕೋಣೆಯಲ್ಲಿ ಉಳಿದ್ದುಕೊಂಡು ತಮ್ಮ ಇತರೆ ಕ್ರಿಯೆ ಮಾಡಿಕೊಂಡು, ಮಲ್ಲಪ್ಪ ಬಡಿಗೇರ ಈತನು ನಿದ್ದೆ ಜಾರಿದಾಗ, ನಾಗಮ್ಮ ಇವಳು ತನ್ನ ದುಪ್ಪಟದಿಂದ ಬಾತ್ರೂಮಿನ ಕಿಟಕಿಯ ಕಬ್ಬಿಣದ ಸರಳಗೆ ಉರುಲು ಹಾಕಿಕೊಂಡು ಸಾವನ್ನಪ್ಪಿರಬಹುದು. ಈ ಕುರಿತು ಶವ ಪರೀಕ್ಷೆ ಮಾಡಿಸಿ ಸಾವಿನ ನಿಜವಾದ ಕಾರಣ ಏನೆಂದು ತಿಳಿಯಬೇಕು ಎಂದು ಮೃತ ನಾಗಮ್ಮನ ತಾಯಿ ಸೂರಮ್ಮ ದೇವಿ ಕರಜಗಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಗಳು ನಾಗಮ್ಮ ಮದುವೆಯಾದ ಮೂರು ವರ್ಷಕ್ಕೆ ಗಂಡನನ್ನು ಬಿಟ್ಟು ಮರಳಿ ತವರು ಮನೆಗೆ ಬಂದು, ನಮ್ಮ ಜೊತೆಯೆ ವಾಸಿಸುತ್ತಿದ್ದಳು. ಅವಳಿಗೆ 13 ವರ್ಷದ ಮಗ ಸಹ ಇದ್ದಾನೆ. ನಾಗಮ್ಮ ಕೆಲಸಕ್ಕೆ ಹೋದಾಗ ಮಲ್ಲಪ್ಪ ಬಡಿಗೇರ್ ಈತನಿಗೆ ಪರಿಚಯವಾಗಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.