ಅಪಜಲಪುರ : ಬ್ರಿಟಿಷ್ ಆಡಳಿತದಿಂದ ಮುಕ್ತಿ ಹೊಂದಿದ ಮತ್ತು ಸಹಸ್ರಾರು ಸಂಖ್ಯೆಯಲ್ಲಿ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸಿಕೊಳ್ಳುವ ದಿನವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯಕೋಡಿ ಮಾತಾನಾಡಿದರು.
ಅಫಜಲಪುರ ತಾಲ್ಲೂಕಿನ ಕರ್ಜಗಿ ಗ್ರಾಮದ ವಿಧ್ಯಾದರ್ಶನ್ ನವೋದಯ ಶಾಲೆಯಲ್ಲಿ ಅಧ್ಯಕ್ಷತೆ ವಹಿಸಿದ ಅವರು ೭೭ ನೇ ಸ್ವತಂತ್ರ್ಯೋತ್ಸವದ ಧ್ವಜಾರೋಹಣ ನೆರೆವರಿಸಿ ಮಾತಾನಾಡಿದರು.
ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಒಂದು ಐತಿಹಾಸಿಕ ಘಟನೆಯನ್ನು ಸ್ಮರಿಸುವುದಕ್ಕಾಗಿ ಮಾತ್ರವಲ್ಲದೆ ಪ್ರತಿಕೂಲತೆಯನ್ನು ಮೀರಿದ, ವಿವಿಧತೆಯಲ್ಲಿ ಏಕತೆಯನ್ನು ಸ್ವೀಕರಿಸಿದ ಮತ್ತು ಅಚಲವಾದ ನಿರ್ಣಯದಿಂದ ಕೆತ್ತಿದ ರಾಷ್ಟ್ರದ ನಿರಂತರ ಮನೋಭಾವವನ್ನು ಆಚರಿಸಲು ಸೇರಿರುತ್ತೇವೆ.
ವರ್ಷಗಳ ಹೋರಾಟ, ತ್ಯಾಗ ಮತ್ತು ನಿರ್ಣಯದ ನಂತರ ಭಾರತವು ಅಂತಿಮವಾಗಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಹಿಡಿತದಿಂದ ಹೊರಬಂದ ದಿನವನ್ನು ಇದು ನೆನಪಿಸುತ್ತದೆ. ಈ ದಿನವು ಕಳೆದುಹೋದ ಅಸಂಖ್ಯಾತ ಜೀವಗಳನ್ನು ನೆನಪಿಸುತ್ತದೆ ಮತ್ತು ರಾಷ್ಟ್ರದ ಸಾರ್ವಭೌಮತ್ವವನ್ನು ಭದ್ರಪಡಿಸಲು ಮಾಡಿದ ಅವಿರತ ಪ್ರಯತ್ನಗಳನ್ನು ನೆನಪಿಸುತ್ತದೆ ಎಂದು ಹೇಳಿದರು.
ತದನಂತರ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆಕರ್ಷಣೆವಾಗಿತ್ತು.ಅದಲ್ಲದೆ ಮಕ್ಕಳಿಂದ ದೇಶ ಭಕ್ತಿ ಗೀತೆ, ನಾಟಕ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರೇಮಾ ನಯಕೋಡಿ ಸಹ ಶಿಕ್ಷಕ ಅಷ್ಪಾಕ ಬಾಸಗಿ, ವಾಣಿಶ್ರೀ ಪತ್ತಾರ್, ಅಶ್ವಿನಿ ತೇಲಿ, ಮೀನಾಕ್ಷಿ ಕೋಳಿ, ರೇಖಾ ರಾಮನಗರ, ಐಶ್ವರ್ಯ ಜಿಡ್ಡಗಿ, ರವಿಕುಮಾರ ಶಿವುರ, ಸೈಫನ್ ಅಳ್ಳಗಿ, ಮರೆಪ್ಪ ಕರಜಗಿ, ಮಹಾದೇವಪ್ಪ ಬಳಗಾರಿ, ಸೇರಿದಂತೆ ಪಾಲಕರು ಮುದ್ದು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ : ಉಮೇಶ್ ಅಚಲೇರಿ
ಅಫಜಲಪುರ / ಕಲ್ಬುರ್ಗಿ