ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ರಾಷ್ಟ್ರ ಪ್ರೇಮಕ್ಕೆ ನಮ್ಮ ಶಾಲೆ ಮಾದರಿ..
ಇಂಡಿ : ನಮ್ಮ ಹಿರಿಯ ಪ್ರಾಥಮಿಕ ಶಾಲೆ ತಡವಲಗಾ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಮ್ಮಣ್ಣ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕಿನ ತಡವಲಗಾ ಗ್ರಾಮದ ನಮ್ಮ ಹಿರಿಯ ಪ್ರಾಥಮಿಕ ಶಾಲೆಯು ಗ್ರಾಮದ ಒಂದು ಮಾದರಿಯಾದ ಶಾಲೆಯಾಗಿದ್ದು, ಮುದ್ದು ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ಹಾಗೂ ರಾಷ್ಟ್ರ ಪ್ರೇಮ ಬೆಳೆಸಿ ಭವ್ಯ ಭಾರತದ ಕನಸು ನನಸು ತುಂಬಾ ಸಹಕಾರಿಯಾಗಿದೆ. ಕಾರ್ಯಕ್ರಮದಲ್ಲಿ ಅಧ್ಯಕ್ಷ ಅರ್ಜುನ ತಳವಾರ, ಶರಣು ಕುಂಬಾರ , ಚಂದ್ರಮಾ ಜಾಡರ , ಗಿರಮಲ್ಲ ಗೋಡೆಕಾರ ಸಂಘದ ಸಲಹಾ ಸದಸ್ಯರು ಭಾಗವಹಿಸಿದ್ದರು.
ಮುದ್ದು ಮಕ್ಕಳಿಗೆ ದೇಶಭಕ್ತಿ ಗೀತೆಗಳ ನೃತ್ಯ ಹಾಗೂ ಮಕ್ಕಳಿಂದ ಕನ್ನಡ ಮತ್ತು ಇಂಗ್ಲಿಷ್ ಭಾಷಣಗಳು 77ನೇ ಸ್ವತಂತ್ರ ದಿನಾಚರಣೆಗೆ ಅತಿ ಸಂಭ್ರಮಿಸಿದರು. ಮುದ್ದು ಮಕ್ಕಳ ಕಾರ್ಯಕ್ರಮವನ್ನು ಶ್ರೀಮತಿ ಸೌಮ್ಯಾ ಪೂದ್ದಾರ ನಿರ್ವಹಿಸಿದರೆ,ಕು.ವಿದ್ಯಾರಾಣಿ ಮಿರ್ಜಿ ಸ್ವಾಗತಿಸಿ , ಮುಖ್ಯ ಗುರುಗಳು ಎನ್.ಎ ತಳವಾರ ವಂದಿಸಿದರು. ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳು ಹಾಗೂ ಸರ್ವ ಶಿಕ್ಷಕ ವೃಂದ ಭಾಗವಹಿಸಿದರು.