ಹನೂರು ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ..
ಹನೂರು : ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಸಕ ಎಂ ಆರ್ ಮಂಜುನಾಥ್ ಅವರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆಚಾಲನೆ ನೀಡಲಾಯಿತು,ಬಳಿಕ ವಿವಿಧ ಶಾಲೆ ಮಕ್ಕಳಿಂದ ಪಥ ಸಂಚಲನ ವನ್ನು ನಡೆಸಲಾಯಿತು.
ಶಾಲಾ ಮಕ್ಕಳಿಂದ ನೃತ್ಯ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜನೆ ಮಾಡಲಾಗಿದ್ದ ನೃತ್ಯ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಿ ಸಾರುವ ಹಾಡಿಗೆ ಹೆಜ್ಜೆ ಹಾಕುವ ನೃತ್ಯ ಹಾಗೂ ನಾಟಕ ಪ್ರದರ್ಶನ ಮಾಡಿದರು. ಹೋಲಿ ಏಂಜಲ್ ಶಾಲೆಯ ಮಕ್ಕಳು ವೀರ ಯೋಧರಿಗೆ ನಮನ ಸಲ್ಲಿಸುವ ನೃತ್ಯಕ್ಕೆ ಹೆಜ್ಜೆ ಹಾಕಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದ ಪುಟಾಣಿ ಮಕ್ಕಳುಗಳು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಲ್ಯಾಪ್ ಟಾಪ್ ಗಳನ್ನು ವಿತರಣೆ ಸನ್ಮಾನ ಮಾಡಲಾಯಿತು, ಇನ್ನೂ ಇದೆ ವೇಳೆ ಏಳು ಬಾರಿ ರಾಷ್ಟ್ರ ಪ್ರತಿ ಪದಕ ಪಡೆದ ಪಟ್ಟಣದ ದೇವಾಂಗ ಪೇಟೆ ಮಾಜಿ ಸೈನಿಕ ವೆಂಕಟರಾಮನ್ ಅವರನ್ನು ತಾಲ್ಲೂಕು ಆಡಳಿತ ಹಾಗೂ ಶಾಸಕರು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರು ಪ್ರಸಾದ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಮಹೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ಇನ್ಸ್ಪೆಕ್ಟರ್ ಶಶಿ ಕುಮಾರ್, ಕಾವೇರಿ ವನ್ಯ ಜೀವಿ ಸಹಾಯಕ ಅರಣ್ಯ ಅಧಿಕಾರಿ ಅಂಕ ರಾಜು, ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್ ಕುಮಾರ್, ಗಿರೀಶ್ ಕುಮಾರ್, ಹರೀಶ್ ಕುಮಾರ್, ಸಂಪತ್, ಮಹೇಶ್ ನಾಯ್ಕ್, ಮಹೇಶ್, ರೂಪ, ಮಾಮ ತಾಜ್ ಬಾನು, ಮಂಜುಳಾ ಸತ್ತಿಶ್, ಪವಿತ್ರ, ಹಾಗೂ ರಾಜಶ್ವ ನಿರೀಕ್ಷಕ ಮಹದೇವಸ್ವಾಮಿ, ಗ್ರಾಮ ಲೆಕ್ಕಿಗ ಶೇಷಣ್ಣ, ಸೇರಿದಂತೆ ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಕಂದಾಯ ಇಲಾಖೆ ಸಿಬ್ಬಂದಿ ಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಚೇತನ್ ಕುಮಾರ್ ಎಲ್ ತಾಲ್ಲೂಕು ಹನೂರು , ಚಾಮರಾಜನಗರ ಜಿಲ್ಲೆ.