ಇಂಡಿಯಲ್ಲಿ ಕಪ್ಪುಪಟ್ಟಿ ಕಟ್ಟಿಗೊಂಡು ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ
ಇಂಡಿ : ವಿವಿಧ ಬೇಡಿಕೆ ಆಗ್ರಹಿಸಿ ಕಪ್ಪು ಕಟ್ಟಿಕೊಂಡು ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಆಡಳಿತ ಸೌಧದ ಎದುರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಗುರುವಾರ ರಾಜ್ಯದಾದ್ಯಂತ ರಾಜ್ಯ ಸಂಘದ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಇಂಡಿ ತಾಲ್ಲೂಕಿನಲ್ಲಿಯೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಗ್ರಾಮ ಆಡಳಿತ ತಾಲೂಕು ಘಟಕದ ಅಧ್ಯಕ್ಷ ಯಲ್ಲು ಪೂಜಾರಿ ಮಾತನಾಡಿದರು.
ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ’ ಎಂದರು.
ಆಧುನಿಕ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅವಶ್ಯ ಸೌಲಭ್ಯವನ್ನು ಕಲ್ಪಿಸುವವರೆಗೆ ಸೆ. 22ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1–5 ವೆಬ್ ಅಪ್ಲಿಕೇಷನ್ ಮತ್ತು ಪೌತಿ ಆಂದೋಲನ ಆ್ಯಪ್ ತಂತ್ರಾಂಶಗಳ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಪದೋನ್ನತಿ, ವರ್ಗಾವಣೆ, ನೌಕರರ ಅಮಾನತ್ತು ಸೇರಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳಗೆ ಸರ್ಕಾರ ಸ್ಪಂದಸದೇ ಇದ್ದಲ್ಲಿ ಸೆ. 26ರಿಂದ ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ನೆಟ್ ಅಪ್ಲಿಕೇಶನ್ ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಶಿರಸ್ತೆದಾರ ಬಿ ಎ ರಾವೂರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗಳಿಗೆ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಸರಕಾರ ಶೀಘ್ರವಾಗಿ ಪರಿಹರಿಸಬೇಕು. ಅತೀ ಹೆಚ್ಚಾಗಿ ಗ್ರಾಮೀಣ ಭಾಗದ ರೈತರ ಕೆಲಸ ಕಾರ್ಯಗಳು ಮಾಡುತ್ತಿದ್ದು, ಮೊಬೈಲ್ ನೆಟ್ ವರ್ಕ ಸೇರಿದಂತೆ, ಪುಡಾರಿ ಪುಂಡರ್ ತಕರಾರು ಒತ್ತಡ ಕೂಡಾ ಅವರ ಮೇಲಿದೆ. ಹಾಗಾಗಿ ಸರಕಾರ ಸಕಾರಾತ್ಮಕ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಅಧಿಕಾರಿಗಳ ಬೇಡಿಕೆಗಳೇನು?
ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು.
• ಕಚೇರಿ, ಗುಣಮಟ್ಟದ ಮೊಬೈಲ್, ಡೇಟಾ, ಸಿಮ್ ನೀಡಬೇಕು.
ಪ್ರಿಂಟರ್ ಹಾಗೂ ಸ್ಕ್ಯಾನರ್, ಲ್ಯಾಪ್‌ಟಾಪ್, ಗೂಗಲ್ ಕ್ರೋಮ್ ಬುಕ್ ಒದಗಿಸಬೇಕು.
• ಸರಕಾರಿ ರಜಾ ದಿನಗಳಂದು ಮೆಮೊ ಕೊಡುವ ಅಧಿಕಾರಿಗಳ ವಿರುದ್ದ ಕ್ರಮ.
• ಅಂತರ ಜಿಲ್ಲಾ ವರ್ಗಾವಣೆ ನಿಯಮ 16 (ಎ) ಉಪಖಂಡ (2) ಮರುಸೇರ್ಪಡೆ.
ಪತಿ-ಪತ್ನಿ ವರ್ಗಾವಣೆ ಪ್ರಕರಣವನ್ನು ಪರಿಗಣಿಸಬೇಕು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಆಹಾರ ನಿರೀಕ್ಷಕ ಹುದ್ದೆಗೆ ಪದೋನ್ನತಿ.
ಕೆಲಸದ ಅವಧಿ ಮುಗಿದ ಬಳಿಕ ಇಲಾಖೆಯ ವರ್ಚುಯಲ್ ಸಭೆಗಳನ್ನು ನಡೆಸಬಾರದು.
ಪ್ರಯಾಣ ಭತ್ಯೆಯನ್ನು 500 ರೂ.ಗಳಿಂದ 3000 ರೂ.ಗಳಿಗೆ ಹೆಚ್ಚಳ.
ಕರ್ತವ್ಯ ನಿರತದಲ್ಲಿ ಸಾವನ್ನಪ್ಪಿದ್ದರೆ ಅವರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು.
ಬೇಡಿಕೆಗಳನ್ನು ಪೂರೈಸಿ ಉತ್ತಮ ಗುಣಮಟ್ಟದ ರೀತಿಯಲ್ಲಿ ಸಾರ್ವಜನಿಕ ಮತ್ತು ಸರಕಾರಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರ, ಆರ್ ಬಿ ಮೂಗಿ, ಕಂದಾಯ ನಿರೀಕ್ಷಕ ಎಚ್ ಎಸ್ ಗುನ್ನಾಪುರ, ಗ್ರಾಮ ಆಡಳಿತ ಸಂಘದ ಉಪಾಧ್ಯಕ್ಷ ಸಿದ್ದು ಲಾಳಸಂಗಿ, ಕೆ ಎಸ್ ಚೌಧರಿ, ಶಿವು ವಾಲಿಕಾರ, ಪ್ರಕಾಶ ಚೌಡಿಹಾಳ, ಎಮ್ ಆರ್ ರಾಠೋಡ, ಎಸ್ ಎಸ್ ಪೂಜಾರಿ, ಎಸ್ ಎಸ್ ಹಿರೇಬೇವನೂರ, ರವಿ ಪೂಜಾರಿ, ಶ್ರೀಶೈಲ ಹಂಚನಾಳ, ಎಸ್ ಎಸ್ ಮೊದಿ, ಪ್ರವೀಣ ಲಮಾಣಿ, ರವಿ ಪಾದಗಟ್ಟಿ, ಜಿ ಎಮ್ ಬಿರಾದಾರ, ಎಸ್ ಎಸ್ ಬಿರಾದಾರ, ಸತೀಶ ಮಂಗಳವಾಡೆ, ವಿದ್ಯಾ ಸರಸಂಬಿ, ಭೂಮಿಕಾ ಅವರಾದಿ, ಕವಿತಾ ಕರಜಗಿ, ಈರಮ್ಮ ಜೋಗುರ, ಸವಿತಾ ಹಚಡದ ಎಮ್ ಎಮ್ ನಾಧಾಪ್, ಡಬ್ಲ್ಯೂ ಐ ಇಂಡಿಕರ, ಶಂಕರ್ ಕಲಕೇರಿ, ಮಣಿಕಂಠ ಗೊಂದಳಿ, ಗಡ್ಡೆಪ್ಪ ಅವಜಿ, ಬಸವರಾಜ ಅವಜಿ ಉಪಸ್ಥಿತರಿದ್ದರು.