ಇಂಡಿ : ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ ಖಡಕ ಸೂಚನೆ : ಎಸಿ ಅಬೀದ್ ಗದ್ಯಾಳ
ಇಂಡಿ : ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ, ಕನ್ನಡ ಭಾಷೆಗೆ ಪ್ರಥಮ ಆದ್ಯತೆ ಇದೆ. ಅದಕ್ಕಾಗಿ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಪ್ರಥಮವಾಗಿ ಬರೆದಿರಬೇಕು ಹಾಗೂ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಭಾಷೆಯ ದೊಡ್ಡ ಅಕ್ಷರದಲ್ಲಿ ಕಣ್ಣಿಗೆ ಕಾಣುವಂತೆ ಕಡ್ಡಾಯವಾಗಿ ಅಳವಡಿಸಿಬೇಕು ಎಂದು ಸರಕಾರ ಮಾರ್ಗಸೂಚಿ ಹೊರಡಿಸಿದೆ. ಒಂದು ವೇಳೆ ಮಾರ್ಗಸೂಚಿ ಬಗ್ಗೆ ನಿರ್ಲಕ್ಷ್ಯ ತೋರಿದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ ಎಚ್ಚರಿಕೆ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ನೀಡಿದರು.
ಗುರುವಾರ ನಗರದ ಪ್ರಮುಖ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕವನ್ನು ಆಡಳಿತ ಸೌಧದಿಂದ ಪರಿಶೀಲನೆ ಪ್ರಾರಂಭಿಸಿ ಬಸವೇಶ್ವರ ವೃತ್ , ಅಂಬೇಡ್ಕರ್ ವೃತ್ ಹಾಗೂ ಮಹಾವೀರ ವೃತ್ ದ ವರೆಗೆ ತೆರಳಿ ನಮ್ಮ ಭಾಷೆಯ ಅಳಿವು, ಉಳುವಿನಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯವಾಗಿದೆ.ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವ್ಯಾಪಾರಸ್ಥರು ವರ್ತಕರು ತಮ್ಮ ಅಂಗಡಿಗಳ ಮೇಲೆ ಶೇಕಡಾ 60% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ಅಳವಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ ಎಸ್ ಕಡಕಭಾವಿ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಪುರಸಭೆ ಸದಸ್ಯ ಮುಸ್ತಾಕ ಇಂಡಿಕರ, ಕರವೇ ತಾಲ್ಲೂಕು ಅಧ್ಯಕ್ಷ ಬಾಳು ಮುಳಜಿ, ರಾಜು ಕುಲಕರ್ಣಿ ಸಚಿನ್ ನಾವಿ ಮಹೇಶ್ ಹೂಗಾರ್ ಮಹಿಬೂಬ್ ಬೆನ್ನೂರ್ ಪ್ರವೀಣ್ ಪೂದ್ದಾರ, ಸಂದೇಶ್ ಗಲಗಲಿ ರಾಮಸಿಂಗ ಕನ್ನೊಳ್ಳಿ, ಶಿವಾನಂದ್ ಬಡಿಗೇರ, ಅಶೋಕ್ ಅಕಲಾದಿ, ಕೇಶವ್ ಕಾಟ್ಕರ್, ಸುದೀಪ್ ನಾವಿ ,ಪ್ರದೀಪ್ ಶೆಟ್ಟಿ, ಅದೃಶ್ಯಪ್ಪ ವಾಲಿ ಹಾಗೂ ಇನ್ನೂ ಕರವೇ ಕಾರ್ಯಕರ್ತರು ನಾಯಕರು ಹಾಗೂ ಆಶಾ ಕಾರ್ಯಕರ್ತರು ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.