ರೈತರ ಮೇಲೆ ಇಂಡಿ ಸಿಪಿಐ ದಬ್ಬಾಳಿಕೆ..! ಮಾಜಿ ಶಾಸಕ ರವಿಕಾಂತ್ ಪಾಟೀಲ
ಇಂಡಿ: ಬಡ ರೈತರ ಮೇಲೆ ಇಂಡಿ ಗ್ರಾಮೀಣ ಸಿಪಿಐ ದಬ್ಬಾಳಿಕೆ ಮಾಡುತ್ತಿದ್ದಾರೆ, ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೂ ಒಂದು ಪಕ್ಷಗಾರರ ಪರವಾಗಿ ಕಾರ್ಯ ಮಾಡಿ, ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರವಿಕಾಂತ್ ಪಾಟೀಲ ಆರೋಪಿಸಿದರು.
ಬುಧವಾರ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ
ಅವರು, ತಾಲ್ಲೂಕಿನ ಅಗರಖೇಡ ಗ್ರಾಮದ ರೈತ
ಭೀಮಾಶಂಕರ ಸಾವಳಗಿ, ಸಂಗನಬಸವ ಸಾವಳಗಿ ಹಾಗೂ ಇವರ ಕುಟುಂಬದ ಮೇಲೆ ಸುಖಾ ಸುಮ್ಮನೆ ಸಿಪಿಐ ತೊಂದರೆ ಕೊಡುತ್ತಿದ್ದಾರೆ. ಸುಮಾರು 8 ವರ್ಷಗಳ ಹಿಂದೆ ಸ್ವಗ್ರಾಮದ ಬಿರಾದಾರ ಎಂಬುವರ ಕಡೆ ಸಾವಳಗಿ
ಕುಟುಂಬಸ್ಥರು ಸಾಲ ಪಡೆದು ಅವರಿಗೆ ಜಮೀನು ಬರೆದು ಕೊಟ್ಟಿದ್ದಾರೆ. ಅದನ್ನು 3 ವರ್ಷದೊಳಗಾಗಿ ಹಣ ಕೊಟ್ಟು ಮರಳಿ ಪಡೆಯಬೇಕೆಂದು ಅನೇಕ ಬಾರಿ ಪ್ರಯತ್ನ ಪಟ್ಟರು. ಆದರೆ ಬಿರಾದಾರ ಅವರು ಕೊಟ್ಟ ಹಣಕ್ಕಿಂತ ಹೆಚ್ಚಿನ ಹಣ ಬೇಡಿಕೆ ಇಟ್ಟಿರುವುದರಿಂದ ಗ್ರಾಮಸ್ಥರು ಸೇರಿ ಪಂಚಾಯತ್ ನಡೆಸಿದರೂ ಆ ಸಮಸ್ಯೆ ಪರಿಹಾರ ಕಾಣಲಿಲ್ಲ. ಆದ್ದರಿಂದ ಸವಳಗಿ ಕುಟುಂಬದವರು ನ್ಯಾಯಾಲಯದ ಮೊರೆ ಹೊಗಿದ್ದಾರೆ. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿರುವ ಬಗ್ಗೆ ಇಂಡಿ ಗ್ರಾಮೀಣ ಸಿಪಿಐ ಗಮನಕ್ಕೆ ಇದ್ದರೂ ಪದೆ ಪದೇ
ಸಾವಳಗಿ ಕುಟುಂಬದವರಿಗೆ ಫೋನ್ ಕರೆ ಮೂಲಕ
ಮಾನಸಿಕ ಹಿಂಸೆ ನೀಡುವ ಮತ್ತು ದಬ್ಬಾಳಿಕೆಯ ಹಾಕುವ
ಪ್ರಯತ್ನ ಮಾಡುತ್ತಿದ್ದಾರೆ. ಅದಲ್ಲದೇ ನ್ಯಾಯಾಲಯ
ನಿಂದನೆ ಮತ್ತು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ
ಬೆಳಗಾವಿ ಐಜಿ , ಗೃಹ ಮಂತ್ರಿ ಹಾಗೂ ಸರಕಾರಕ್ಕೆ ಈ
ಮೇಲ್ ಮೂಲಕ ಪತ್ರ ರವಾನೆ ಮಾಡುತ್ತೇನೆ. ಈ
ಕೂಡಲೇ ಸಿಪಿಐ ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ
ಕಾರ್ಯನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.