ಇಂಡಿ | ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ
ಇಂಡಿ: ಇಂಡಿ ನಗರದ ಮಹಿಳಾ ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಜ್ ಕೋ ಆಪರೇಟೀವ್ ಬ್ಯಾಂಕ್ ೭ ವರ್ಷಗಳಲ್ಲಿ ೪೮.೭೯ ಕೋಟಿ ರೂ, ಗಳ ಠೆವಣಿ ಸಗ್ರಹಣೆ ಮಾಡಿ, ೪.೪೨ ಕೋಟಿ ರೂ,ಗಳ ಸಾಲ ವಿತರಣೆ ಮಾಡಿದೆ. ಬ್ಯಾಂಕಿನ ಸಾಧನೆ ಮತ್ತು ೭ ವರ್ಷ ತುಂಬಿದ ಪರಿಣಾಮ ಸೋಮವಾರ ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸೇರಿ ಬ್ಯಾಂಕಿನಲ್ಲಿ ಲಕ್ಷ್ಮೀ ಪೂಜೆ ಮಾಡಿ ಸಂತಸಪಟ್ಟರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ, ರಾಜಕೀಯ ಮುಖಂಡ ರಮೇಶ ರಾಠೋಡ, ಬ್ಯಾಂಕಿನ ನಿರ್ದೇಶಕರಾದ ಜಗದೀಶ ಕ್ಷತ್ರಿ, ವಲಯ ಅಧಿಕಾರಿ ರವಿಕಾಂತ ಪಾಟೀಲ, ಇಂಡಿ ಶಾಖೆಯ ಅಧಿಕಾರಿ ಶಿವಾನಂದ ಚಾಳೇಕರ, ಶ್ವೇತಾ ಬಿರಾದಾರ ಅಲ್ಲದೇ ಶಾಖೆಯ ಎಲ್ಲಾ ಸಿಬ್ಬಂದಿಗಳು ಇದ್ದರು.
ಇಂಡಿ: ನಗರದಲ್ಲಿಯ ಮಹಿಳಾ ಸಿದ್ದಸಿರಿ ಬ್ಯಾಂಕಿನ ೭ ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ಯ ಲಕ್ಷ್ಮೀ ದೇವರಿಗೆ ಪೂಜೆ ಸಲ್ಲಿಸಲಾಯಿತು



















