ಪೋಲಿಸ್ ಅಧಿಕಾರಿಗಳ ಅನುಚಿತ ವರ್ತನೆ ರೈತರ ಪ್ರತಿಭಟನೆ ,ಹಿರಿಯ ಅಧಿಕಾರಿಗಳ ಬೇಟೆಯಲ್ಲಿ ಸುಕಾಂತ್ಯ .
ಹನೂರು : ಹೊರ ದೇಶದಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿದ ಜಗದೀಶ್ ಎಂಬುವವರು ಪಚ್ಚೇದೊಡ್ಡಿಯಲ್ಲಿ ಜಮೀನು ಖರೀದಿಸಿ ನಂತರ ಅದರ ಅಭಿವೃದ್ಧಿಗೆ ಊರಿನ ರಸ್ತೆಯನ್ನು ಹಾಳು ಮಾಡಿದರ ಪರಿಣಾಮವಾಗಿ ನ್ಯಾಯ ಕೇಳಲು ಹೋದವರ ಮೇಲೆ ದಮ್ಕಿ ಹಾಕಿದ ಪ್ರಸಂಗವಾಗಿ ದಾವೆ ಹೂಡಲಾಗಿತ್ತು .
ಇದೇ ವಿಷಯವಾಗಿ ರಾಮಾಪುರ ಠಾಣೆಯಲ್ಲಿ ದೂರು ನೀಡಲು ಹೋದಾಗ ಮಹಿಳೆಯೊಬ್ಬರಿಗೆ ರೈತ ಸಂಘದ ಅಧ್ಯಕ್ಷನಿಗೆ ರಾಮಾಪುರ ಪೊಲೀಸ್ ಠಾಣಿಯ ಪಿಎಸ್‌ಐ ನಿಂದನೆ ಮಾಡಿದ್ದಾರೆ ಎಂದು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು .
ಘಟನೆಯ ವಿವರ : ತಾಲೂಕಿನ ಕಾಂಚಳ್ಳಿ ಗ್ರಾಮದ ಪ್ರಕರಣ ಒಂದರಲ್ಲಿ ರೈತ ಸಂಘದ ಅಧ್ಯಕ್ಷ ಅಮ್ಮದ್ ಖಾನ್ ಅವರು ಮದ್ಯಸ್ತಿಕೆ ವಹಿಸಿ ಮಹಿಳೆಯ ಪರ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸ್ಪಂದಿಸಿದ್ದಕ್ಕೆ ರಾಮಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಈಶ್ವರ್ ಎಂಬುವವರು ಮತ್ತೊಬ್ಬ ಅಧಿಕಾರಿ ವೆಂಕಟೇಶ್ ಎಂಬುವವರು ಸೇರಿದಂತೆ ಮಹಿಳೆಗೆ ಹಾಗೂ ರೈತ ಸಂಘದ ಅಧ್ಯಕ್ಷನಿಗೆ ಧಮ್ಮಿ ಹಾಕಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರದಂದು ಪೊಲೀಸ್ ಠಾಣಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರುಗಳು ಮುಖಂಡರುಗಳು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ಗೌಡೆ ಗೌಡ ಮಾತನಾಡಿ ಪ್ರಕರಣ ಒಂದರಲ್ಲಿ ಮಹಿಳೆಯ ಪರವಾಗಿ ಸಹಾಯ ಮಾಡಲು ಠಾಣಿಗೆ ಬಂದಿದ್ದ ನಮ್ಮ ಹನೂರು ತಾಲೂಕು ಅಧ್ಯಕ್ಷರಾದ ಅಮ್ಮದ್ ಖಾನ್ ರವರನ್ನು ಏಕವಚನದಲ್ಲಿ ಮಾತನಾಡಿಸಿ ನಿನ್ನನ್ನು ಒದ್ದು ಒಳಗೆ ಹಾಕುತ್ತೇನೆ ಎಂದಿರುವುದು ತಪ್ಪು ಇದನ್ನು ಉಗ್ರವಾಗಿ ಕಂಡಿಸುತ್ತೇವೆ. ಮಿಲಿಟರಿಯಿಂದ ಬಂದು ಇಲ್ಲಿ ಜನರ ಜೊತೆ ಇಷ್ಟ ಬಂದಹಾಗೆ ಮಾತನಾಡಲು ಜನರು ಇವರ ಮನೆಯ ಹಾಳುಗಳಲ್ಲ,ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೆ ಸಾರ್ವಜನಿಕರ ಜೊತೆ ಈರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಜೊತೆಗೆ ಅಮ್ಮದ್ ಖಾನ್ ರವರು ಪ್ರಕರಣವೊಂದರಲ್ಲಿ ಮದ್ಯಸ್ತಿಕೆವಹಿಸಿರುವುದಕ್ಕೆ ದೂರುದಾರೆ ಮಹಿಳೆಗೆ ಏಕವಚನದಲ್ಲಿ ಧಮ್ಮಿ ಹಾಕಿ ನಿಂದನೆ ಮಾಡಿರುವುದು ಪರಿಯಿಲ್ಲ ಮಹಿಳೆಯ ಜೊತೆ ಮಹಿಳಾ ಅಧಿಕಾರಿಯೆ ಮಾತನಾಡಬೇಕು.ಇವರಿಗೆ ಒಬ್ಬ ಮಹಿಳೆಯನ್ನು ನಿಂದನೆ ಮಾಡುವ ಹಕ್ಕನ್ನು ಯಾರು ಕೊಟ್ಟಿದ್ದು ಎಂದು ಮಾತನಾಡಿದರು.
ಹಿರಿಯ ಅಧಿಕಾರಿಯ ಆಗಮನ
ವಿಚಾರ ತಿಳಿಯುತ್ತಿದ್ದಂತೆ ಹನೂರು ಪೊಲೀಸ್ ಠಾಣಿಯ ಸರ್ಕಲ್ ಇನ್ಸೆಕ್ಟರ್ ಶಶಿಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ರೈತ ಸಂಘದ ಮುಖಂಡರುಗಳ ಮನವೋಲಿಸಿ ಡಿವೈಎಸ್ಪಿ ಧರ್ಮೇಂದ್ರ ಅವರು ಕೂಡ ದೂರವಾಣಿ ಮೂಲಕ ಮಾತನಾಡಿ ನಂತರ ರೈತ ಸಂಘದವರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಇದೇ ವಿಚಾರವಾಗಿ ಉನ್ನತಮಟ್ಟದ ಅಧಿಕಾರಿಗಳು ರೈತ ಸಂಘದ ಮುಖಂಡರಿಗೆ ಅಭಯ ನೀಡಿದರು. ನಾನು ನಾಗಮಂಗಲಕ್ಕೆ ತುರ್ತಾಗಿ ಕರ್ತವ್ಯ ಸಲ್ಲಿಸಲು ಬಂದಿದ್ದೇನೆ ನನಗೆ ಎರಡು ದಿನ ಅವಕಾಶ ಕೊಡಿ ಜಿಲ್ಲಾ ವರಿಷ್ಟಧಿಕಾರಿಗಳಿಗೆ ರಿಪೋರ್ಟ್ ರವಾನಿಸುತ್ತೇನೆ ಕರ್ನಾಟಕ ರೈತ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ದಯವಿಟ್ಟು ಪ್ರತಿಭಟನೆಯನ್ನು ಹಿಂಪಡೆಯಬೇಕು ನಾನು ಬಂದ ನಂತರ ನಮ್ಮ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಶೀಲನೆ ಮಾಡಿ ತಮ್ಮನ್ನು ಸಭೆಗೆ ಆಹ್ವಾನಿಸಿ ಆಗಿರುವ ಸಮಸ್ಯೆಯನ್ನು ಬಗೆಹರಿಸಲಾಗುವುದು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಶೈಲೆಂದ್ರ, ರವಿ ನಾಯ್ಡು, ರಾಜಮ್ಮಣಿ ಸಂತೋಷ್, ಕಾರ್ಯದರ್ಶಿ ಬಸವರಾಜ್,ಲೋಕೇಶ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು .