ಇಂಡಿಯಲ್ಲಿ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಇಂಡಿ: ಪಟ್ಟಣದ ಬೀರಪ್ಪ ನಗರದ ಶ್ರೀ ಧಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಖೇಡಗಿ ವಿರಕ್ತ ಮಠದ ಶಿವಬಸವರಾಜೇಂದ್ರ ಮಹಾಸ್ವಾಮಿಗಳು, ಆಶೀರ್ವಚನ ನೀಡಿ, ಗುಡ್ಡಾಪೂರ ಧಾನಮ್ಮ ತಾಯಿ ಭಕ್ತರ ಬಾಳಿನ ಬೆಳಕಾಗಿದ್ದಾಳೆ, ಭಕ್ತಿಯಿಂದ ಆಕೆಯನ್ನು ಸ್ಮರಿಸಿ ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದರೆ ಆ ಕಾರ್ಯ ಯಶಸ್ವಿಯಾಗೇ ಆಗುತ್ತದೆ. ಧಾನಮ್ಮ ದೇವಿ ಭಕ್ತರಿಗೆ ವರ ನೀಡುವ ದೈವವಾಗಿದ್ದಾಳೆ. ಅಂತಹ ಮಹಾನ್ ತಾಯಿಯ ದೇವಸ್ಥಾನವನ್ನು ನಿರ್ಮಿಸಲು ಇಲ್ಲಿನ ೬೫ ವರ್ಷದ ನೀಲಮ್ಮ ಹಿರೇಮಠ ಎನ್ನುವ ಅಜ್ಜಿಯೋರ್ವರು ತಮ್ಮ ಸ್ವಂತ ಮನೆಯನ್ನೇ ದೇವಸ್ಥಾನವಾಗಿ ಮಾರ್ಪಾಡು ಮಾಡಿ ಪೂಜೆ ಸಲ್ಲಿಸುತ್ತಿರುವುದು ಆಕೆಯ ಭಕ್ತಿಯನ್ನು ತೋರಿಸಿಕೊಡುತ್ತದೆ. ಇನ್ನು ಇಂಡಿ ನಗರದ ಜನ ಗುಡ್ಡಾಪೂರಕ್ಕೆ ಹೋಗಬೇಕೆಂದೇನಿಲ್ಲ. ಬೀರಪ್ಪ ನಗರದ ಗುಡ್ಡಾಪೂರ ಧಾನಮ್ಮದೇವಿ ದೇವಸ್ಥಾನಕ್ಕೆ ಬಂದು ದರ್ಶನ ಪಡೆದರೂ ತಾಯಿ ಭಕ್ತರಿಗೆ ಆಶೀರ್ವದಿಸುತ್ತಾಳೆ ಎಂದರು.
ಈ ಸಂದರ್ಭದಲ್ಲಿ ನೀಲಮ್ಮ ಹಿರೇಮಠ, ಉಮಾ ಪಟ್ಟದಕಲ್ಲು, ವಿದ್ಯಾಶ್ರೀ ಪಾಟೀಲ್, ಸುಜಾತಾ ಬಿರಾದಾರ, ಮಹಾನಂದ ವಾಲಿ, ಸವಿತಾ ಭೈರಶೆಟ್ಟಿ, ದೀಪಾ ಹೂಗಾರ, ಭುವನೇಶ್ವರಿ ಬಂಗಲಿ, ಸುನಂದಾ ಅಂಬಲಗಿ, ಜಯಶ್ರೀ ಬಿರಾದಾರ, ಪ್ರತಿಭಾ ಬುರಕುಲೆ, ಪ್ರಭಾವತಿ ಮಾಕಾ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಬೀರಪ್ಪ ನಗರದ ಶ್ರೀ ಧಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನೀಲಮ್ಮ ಹಿರೇಮಠ, ಉಮಾ ಪಟ್ಟದಕಲ್ಲು, ವಿದ್ಯಾಶ್ರೀ ಪಾಟೀಲ್, ಸುಜಾತಾ ಬಿರಾದಾರ ಇದ್ದರು.
ಇಂಡಿ: ಧಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಖೇಡಗಿ ವಿರಕ್ತ ಮಠದ ಶಿವಬಸವರಾಜೇಂದ್ರ ಸ್ವಾಮೀಜಿಗಳಿಗೆ ದೇವಸ್ಥಾನದ ಭಕ್ತರು ಸತ್ಕರಿಸಿದರು. ನೀಲಮ್ಮ ಹಿರೇಮಠ, ಉಮಾ ಪಟ್ಟದಕಲ್ಲು, ವಿದ್ಯಾಶ್ರೀ ಪಾಟೀಲ್, ಸುಜಾತಾ ಬಿರಾದಾರ ಇದ್ದರು.