ಇಂದಿರಾನಗರ ಬಡಾವಣೆಯಲ್ಲಿ ಹಕ್ಕುಪತ್ರ ನೀಡಿದ ಹಿನ್ನೆಲೆಯಲ್ಲಿ ತಹಶಿಲ್ದಾರರ ಕಚೇರಿ ಮುಂದೆ ಸ್ಥ ಹಲಗಿ ಬಾರಿಸುವ ಧರಣಿ ಸತ್ಯಾಗ್ರಹ ಪ್ರಾರಂಭ.
ಮುದ್ದೇಬಿಹಾಳ: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಹಕ್ಕುಪತ್ರ ನೀಡಿದ ಹಿನ್ನೆಲೆಯಲ್ಲಿ ನಿವಾಸಿಗಳಿಗೆ ಉತಾರ ಸೇರಿದಂತೆ ಮೂಲಸೌಲಭ್ಯ ಒದಗಿಸುವಂತೆ ಆಗ್ರಹಿಸಿ ನಿವಾಸಿಗಳು ತಹಸೀಲ್ದಾರ್ ಕಚೇರಿ ಎದುರಿಗೆ ನಾಲ್ಕನೇ ದಿನಕ್ಕೆ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಬಡಾವಣೆ ನಿವಾಸಿ ಬಸವರಾಜ ಕೋಳೂರ,ರಾಜು ವಡ್ಡರ ಮಾತನಾಡಿ, ಅಧಿಕಾರಿಗಳ ನಡೆಯನ್ನು ಪ್ರತಿಭಟಿಸಿ ಮಂಗಳವಾರ ದಿನಾಂಕ: 30-12-2025 ರಿಂದ ಬೆಳಿಗ್ಗೆ: 10-30 ರಿಂದ ಸಂಜೆ 5 ಗಂಟೆಯವರೆಗೆ ಹಲಗೆ ಬಾರಿಸುವ ಮೂಲಕ ಪ್ರತಿಭಟಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇಂದಿರಾ ನಗರ ನಿವಾಸಿಗಳು ಮತದಾರ ಯಾದಿಯಲ್ಲಿ ಆದ ಅಕ್ರಮವನ್ನು ಸರಿಪಡಿಸದೆ ಹೋರಾಟವನ್ನು ನಿರ್ಲಕ್ಷ್ಯ ಮಾಡಿದರೆ ಹೋರಾಟ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಂಬರೀಶ್ ಉಪ್ಪಲದಿನ್ನಿ,
ಬಾಬು ಬಳಗಾನೂರ, ಬುಡ್ಡಾ ನಿಡಗುಂದಿ, ವಿಷ್ಣುವು ಗಂಗಾಪೂರ,ರಿಯಾಜ್ ಢವಳಗಿ, ಮಂಜುನಾಥ ಚಲವಾದಿ,ಸೀನು ಕಲಾಲ,ಆಶಿಪ್ ನಿಡಗುಂದಿ,ಶಿವು ನಾಗರಬೆಟ್ಟ,ಅನಂದ ಬಂಜೆಂತ್ರಿ,ನಿವಾಸಿಗಳು
ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.