ವಿದ್ಯುತ್ ಕಳ್ಳತನ ಮಹಾ ಅಪರಾಧ
ಇಂಡಿ : ರಾತ್ರಿ ಸಮಯದಲ್ಲಿ ವಿದ್ಯುತ ಕಂಬಗಳ ಮೂಲಕ ನೆರವಾಗಿ ಕದ್ದು ವಾಯರ ಹುಕ್ಕು ಹಾಕಿ
ವಿದ್ಯುತ ಕಳ್ಳತನ ಮಾಡುತ್ತಿರುವುದು ಮಹಾ ಅಪರಾಧವಾಗಿದೆ ಎಂದು ಹೆಸ್ಕಾಂ ಇಂಡಿ ಗ್ರಾಮಿಣ
ಶಾಖೆಯ ಶಾಖಾಧಿಕಾರಿ ಆರ್.ವ್ಹಿ ಕುಂಬಾರ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಅವರು ತಾಲೂಕಿನ ಭುಯ್ಯಾರ ಹಾಗೂ ಹಿರೇಬೆವನೂರ, ನೆಹರು ನಗರದಲ್ಲಿ ವಿದ್ಯುತ ಬಾಕಿ ವಸೂಲಿ ಹಾಗೂ ಅನಧಿಕೃತ ವಿದ್ಯುತ ಕಾರ್ಯಚರಣೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳ್ಳತನದಿಂದಾಗಿ ವಿದ್ಯುತ ಪೊಲಾಗಿ ನಮ್ಮ
ಇಲಾಖೆಗೆ ಹೆಚ್ಚಿನ ಹೊರೆ ಬಿಳ್ಳುತ್ತಿರುವುದರಿಂದ
ವಿದ್ಯುತ ಕಳ್ಳತನ ಮಾಡಬಾರದು. ಒಂದು ವೇಳೆ
ವಾಮ ಮಾರ್ಗದಿಂದ ವಿದ್ಯುತ ಬಳಕೆ ಮಾಡಿದರೆ
ಸೂಕ್ತ ಕಾನೂನು ಕ್ರಮಕೈಗೊಂಡು ಭಾರಿ ದಂಡ ವಿಧಿಸಲಾಗುವುದು. ಆದ್ದರಿಂದ ದಯವಿಟ್ಟು
ಯಾರು ವಿದ್ಯುತ ಕಳ್ಳತÀನ ಮಾಡಲು
ಮುಂದಾಗಬಾರದು ಎಂದರು.
ಈ ವೇಳೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ
ವಾಟರ್ ಹೀಟರ್ ಹಾಗೂ ವಾಯರ್ ವಶಪಡಿಕೊಂಡರು. ಇದರ ಜೊತೆಯಲ್ಲಿ ಗ್ರಾಮಿಣ ಭಾಗದ ಜನರಿಗೆ ವಿದ್ಯುತ ಬಳಕೆ ಕುರಿತು ಅರಿವು ಮೂಡಿಸಿದರು.
ಕಾರ್ಯಚರಣೆಯಲ್ಲಿ ಮಲ್ಲಿಕಾರ್ಜುನ ಮಾಶಾಳ,
ಕಲ್ಲಪ್ಪ ಬಜಂತ್ರಿ, ಮಲ್ಲು ಬೆಳ್ಳಿಹಾಳ, ವಿಜಯ ಧನಗೊಂಡ, ವಿವೇಕ ಖೇಡಗಿ, ಸಲೀಂ ಕೊರಬು,
ರಾಜಕುಮಾರ ವಾಲಿಕಾರ ಸೇರಿದಂತೆ ಅನೇಕ ಸಿಬ್ಬಂದಿ
ವರ್ಗದವರು ಇದ್ದರು.
ಇಂಡಿ ತಾಲೂಕಿನ ಭುಯ್ಯಾರ ಹಾಗೂ ಹಿರೇಬೆವನೂರ, ನೆಹರು ನಗರದಲ್ಲಿ ಕಾರ್ಯಚರಣೆಯಲ್ಲಿ ವಾಟರ್ ಹಿಟರ್ ಹಾಗೂ ವಾಯರ್ ವಶಪಡಿಕೊಂಡಿರುವುದು.