ಚಡಚಣ : ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ವೇಳೆ ಅಬಕಾರಿ ಪೊಲೀಸರು ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ನೂತನ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೋಸ್ಟ್ನಲ್ಲಿ ರವಿವಾರ ನಡೆದಿದೆ. ತುಮಕೂರು ನಿವಾಸಿ ಫೈರೋಜ್ ಸೈಯದ್ ಅಬ್ದುಲ್ ರಹಮಾನ್ ಬಂಧಿತ ಆರೋಪಿ. ಅಕ್ರಮವಾಗಿ ಮದ್ಯ ಸಾಗಾಟ ಮಾಡುವಾಗ ಚೆಕ್ ಪೋಸ್ಟ್ನಲ್ಲಿ ತಪಾಸಣೆ ವೇಳೆ 47.38 ಲಕ್ಷ ಮೌಲ್ಯದ 9108 ಲೀಟರ್ ಬಿಯರ್ ಹಾಗೂ 10 ಲಕ್ಷ ಮೌಲ್ಯದ ಲಾರಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಇಂಡಿ ವಲಯ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.