ವಿಜಯಪುರ : ಕೆಪಿಎಸ್ಸಿ ಪರೀಕ್ಷೆಯಲ್ಲಿ ನೌಕರಿ ಕೊಡಿಸೋದಾಗಿ ಪಿಎಸ್ಐಯೊಬ್ಬರು 15 ಲಕ್ಷ ಬೇಡಿಕೆ ಡೀಲ್ ಮಾಡಿರುವ ಆರೋಪ ಕೇಳಿಬಂದಿದೆ. ಇನ್ನು
ಮುಂಗಡವಾಗಿ 2ಲಕ್ಷ ಪಡೆದಿದ್ದಾರೆ ಎಂದು ಸಂಗಮೇಶ ಝಳಕಿ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಝಳಕಿ ಎಫ್ ಡಿಸಿ ಹುದ್ದೆಗೆ ಪರೀಕ್ಷೆ ಬರೆದಿದ್ದರು.
ಮೈಸೂರಿನ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಆಗಿರುವ ಅಶ್ವಿನಿ ಅನಂತಪುರ ವಿರುದ್ದ ಸಂಗಮೇಶ ಆರೋಪಿಸುತ್ತಿದ್ದಾರೆ. ಸಂಗಮೇಶ ಹಾಗೂ ಅಶ್ವಿನಿ ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದವರು. ಅದಕ್ಕಾಗಿ ನಾನು ನಂಬಿ ಹಣ ನೀಡಿದ್ದು, ಇದೀಗ್ ಹಣ ಹಾಗೂ ಕೆಲಸ ಇಲ್ಲ. ಅದಕ್ಕಾಗಿ ಹಣ ಕೇಳಿದ್ರೇ ಧಮ್ಕಿ ಹಾಕುತ್ತಿದ್ದಾರೆ ಎಂದರು.