ಅಕ್ರಮ ಶ್ರೀಗಂಧ ಕಳ್ಳ ಸಾಗಾಟ: ರಾಮಾಪುರ ಪೊಲೀಸ್ ರಿಂದ ಯಶಸ್ವಿ ಕಾರ್ಯಾಚರಣೆ
ಹನೂರು: ತಾಲೂಕಿನ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜಮೀನಿನಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿದು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಖಚಿತ ಮಾಹಿತಿ ಆಧರಿಸಿ ರಾಮಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು :- ಮುತ್ತು ಶೆಟ್ಟಿಯೂರು ಗ್ರಾಮದ ವಿಜಿ ಸೇಟು ಆಲಿಯಾಸ್ ವಿಜಯ್ ಬಂದಿತ ವ್ಯಕ್ತಿಗಳಾಗಿದ್ದಾರೆ ಶ್ರೀಗಂಧ ಕಳ್ಳತನ ವಿವರ : ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜೀಪುರ ಗ್ರಾಮದ ಸಿದ್ಧಶೆಟ್ಟಿ ರೈತನ ಜಮೀನಿನಲ್ಲಿ ಶ್ರೀಗಂಧದ ಮರವನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಅಜ್ಜೀಪುರ ಗ್ರಾಮದ ವರವಲಯದ ರಸ್ತೆ ಮಂಚಾಪುರ ಗ್ರಾಮದ ಉಡುತೋರೆ ಜಲಾಶಯದ ಚಾನಲ್ ರಸ್ತೆ ಮಾರ್ಗವಾಗಿ ರಾಮಾಪುರ ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದರ್ ರವರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಪಿಎಸ್ಐ ಈಶ್ವರ್ ಅಪರಾಧ ವಿಭಾಗದ ಇಎಸ್ಐ ಲೋಕೇಶ್, ಮುಖ್ಯ ಪೇದೆ ಸಿದ್ದೇಶ್ ಕುಮಾರ್, ಲಿಯಾಕತ್ ಅಲಿಖಾನ್, ಗಿರೀಶ್, ಮಹೇಂದ್ರ ಸೇರಿದಂತೆ ಸಿಬ್ಬಂದಿ ವರ್ಗದವರು ದಾಳಿ ಮಾಡಿ ದ್ವಿಚಕ್ರ ವಾಹನದ ಮೂಲಕ 15 ಕೆಜಿ ತೂಕದ ಶ್ರೀಗಂಧದ ತುಂಡುಗಳು ಹಾಗೂ ಚಕ್ಕೆ ಸಮೇತ ಪರಿಶೀಲಿಸಿ ವಶಕ್ಕೆ ಪಡೆದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ ಟಿ ಕವಿತಾ ಅವರ ಸೂಚನೆಯ ಮೇರೆಗೆ ರಾಮಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ